ಅಥಣಿ/ಬೆಳಗಾವಿ:ಚುನಾವಣೆ ಅಕ್ರಮ ತಡೆಯಲು ತಪಾಸಣೆ ಕೇಂದ್ರವಿದ್ದರೂ ಒಂದೇ ಒಂದು ಬ್ಯಾರಿಕೇಡ್ ಇಲ್ಲದ ಕಾರಣ ಇಲ್ಲ ವಾಹನ ತಪಾಸಣೆ ಮಾಡದೆ, ವಾಹನಗಳು ಹಾಗೆ ಸಂಚಾರ ಮಾಡುತ್ತಿರುವ ಘಟನೆ ಅಥಣಿ ತಾಲೂಕಿನ ಕೋಕಟನೂರ ಬಳಿಯ ಎಲ್ಲಮವಾಡಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.
ನೀತಿಸಂಹಿತೆ ಜಾರಿ: ಇಲ್ಲಿ ನೆಪಕ್ಕೆ ಮಾತ್ರ ಚೆಕ್ಪೋಸ್ಟ್, ತಪಾಸಣೆ ವರ್ಸ್ಟ್, ರಿಯಾಲಿಟಿ ಚೆಕ್
ಬ್ಯಾರಿಕೇಡ್ ಇಲ್ಲದ ಕಾರಣ ಇಲ್ಲ ವಾಹನ ತಪಾಸಣೆ ಮಾಡದೆ ಹಾಗೆ ಸಂಚಾರ ಮಾಡುತ್ತಿರುವ ಘಟನೆ ಅಥಣಿ ತಾಲೂಕಿನ ಕೋಕಟನೂರ ಬಳಿಯ ಎಲ್ಲಮವಾಡಿ ಗ್ರಾಮದ ಬಳಿ ಬೆಳಕಿಗೆ ಬಂದಿದೆ.
ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಘೋಷಣೆ ಬೆನ್ನಲ್ಲೇ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್ 11ರಿಂದ ನೀತಿಸಂಹಿತೆ ಜಾರಿಯಾಗಿದ್ದರಿಂದ, ಜಿಲ್ಲಾಡಳಿತ ತಯಾರಿ ಜೊತೆ ಭದ್ರತೆ ಕೂಡ ಒದಗಿಸಿದೆ. ಅಥಣಿ ತಾಲೂಕಿನಲ್ಲಿ ಪ್ರಮುಖ ಏಳು ಕಡೆ ರಸ್ತೆ ಮಾರ್ಗಗಳು ಇರುವುದರಿಂದ ಉಪ ಚುನಾವಣೆಯಲ್ಲಿ ಯಾವುದೇ ಅಕ್ರಮ ಹಣ, ಮದ್ಯ ಸಾಗಾಟವಾಗುವುದನ್ನು ತಡೆಗಟ್ಟಲು ತಾಲೂಕಿನ ಅಂಚಿನಲ್ಲಿ ತಪಾಸಣಾ ಕೇಂದ್ರಗಳನ್ನು ಏನು ಜಿಲ್ಲಾಡಳಿತ ಪ್ರತಿ ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಾಣವಾಗಿರುತ್ತದೆ.
ನೀತಿ ಸಂಹಿತೆ ಜಾರಿಯಾಗಿ ಮೂರು ದಿನ ಕಳೆದರೂ ಕೊಕಟನೂರು ಗ್ರಾಮ ಸಮೀಪ ತಪಾಸಣಾ ಕೇಂದ್ರದಲ್ಲಿ ನೆಪಮಾತ್ರಕ್ಕೆ ಒಬ್ಬ ಪೊಲೀಸ್ ಅಧಿಕಾರಿ ಇದ್ದು, ಅಲ್ಲಿ ಯಾವುದೇ ರೀತಿಯ ವಾಹನಗಳನ್ನು ತಪಾಸಣೆ ಮಾಡುತ್ತಿಲ್ಲ. ಈಟಿವಿ ಭಾರತ್ ಈ ಚೆಕ್ಪೋಸ್ಟ್ ನಲ್ಲಿ ಯಾವ ರೀತಿ ತಪಾಸಣೆ ನಡೆಯುತ್ತಿದೆ ಎಂಬುದನ್ನು ಪರಿಶೀಲಿಸಲು ತೆರಳಿದ್ದಾಗ ಈ ರಸ್ತೆಯಲ್ಲಿ ಯಾವುದೇ ತಪಾಸಣೆ ನಡೆಯುತ್ತಿರುವುದು ಕಂಡು ಬಂದಿಲ್ಲ. ಅಥಣಿಯಿಂದ ಕೋಕಟನೂರ, ಹಾಗೂ ಸಾವಳಗಿ ಇಂದ ಬಾಗಲಕೋಟೆ ಮತ್ತು ವಿಜಯಪುರಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಮಾರ್ಗಗಳಲ್ಲಿ ಯಾವುದೇ ರೀತಿಯ ತಪಾಸಣೆ ಇಲ್ಲದಿರುವುದು ಬೆಳಕಿಗೆ ಬಂದಿದೆ