ಬೆಳಗಾವಿ:ಮಹಾಮಾರಿ ಕೊರೊನಾದಿಂದ ಶಾಲೆ-ಕಾಲೇಜುಗಳು ಇನ್ನೂ ಆರಂಭವಾಗಿಲ್ಲ. ಆನ್ ಲೈನ್ ಮೂಲಕ ತರಗತಿಗಳು ನಡೆಯುತ್ತಿವೆ. ಆದರೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಾಡಂಚಿನ ಪ್ರದೇಶಗಳಲ್ಲಿ ನೆಟ್ವರ್ಕ್ ಸಮಸ್ಯೆಗೆ ವಿದ್ಯಾರ್ಥಿಗಳು ಹೈರಾಣಾಗಿದ್ದಾರೆ. ಇಂಟರ್ನೆಟ್ ಪಡೆಯಲು ಇಲ್ಲಿನ ವಿದ್ಯಾರ್ಥಿಗಳು ಗುಡ್ಡ ಹತ್ತುತ್ತಿದ್ದಾರೆ.
ನೆರೆಯ ಮಹಾರಾಷ್ಟ್ರಕ್ಕೆ ಅಂಟಿಕೊಂಡಿರುವ ಕಣಕುಂಬಿ ಹಾಗೂ ಜಾಂಬೋಟಿ ಮತ್ತು ಗೋವಾಕ್ಕೆ ಅಂಟಿಕೊಂಡಿರುವ ಗುಂಜಿ ಹಾಗೂ ಲೋಂಡಾ ಭಾಗದ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿದ್ದಾರೆ. ಅಲ್ಲದೇ ಚೋರ್ಲಾ, ಮಾನ, ಪಾರವಾಡ್, ಚಿಕಲೆ ಗ್ರಾಮಗಳ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣ ಪಡೆಯಲು ಹರಸಾಹಸ ಪಡೆಯುತ್ತಿದ್ದಾರೆ. ನೆಟ್ವರ್ಕ್ಗಾಗಿ ಗುಡ್ಡ ಏರಿ ಆನ್ ಲೈನ್ ತರಗತಿಗೆ ಹಾಜರಾಗುತ್ತಿದ್ದಾರೆ.