ಅಥಣಿ(ಬೆಳಗಾವಿ) :ಕೊರೊನಾ ತಡೆಯುವ ನಿಟ್ಟಿನಲ್ಲಿ ಅಥಣಿ ತಾಲೂಕಿನಲ್ಲಿ ಒಂದು ವಾರಗಳ ಮಟ್ಟಿಗೆ ಲಾಕ್‌ಡೌನ್ ಜಾರಿ ಮಾಡಲಾಗಿತ್ತು. ಆದರೆ, ಸಿಎಂ ರಾಜ್ಯಾದ್ಯಂತ ಲಾಕ್‌ಡೌನ್ 22ರಿಂದ ಹಿಂಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ ಹಿನ್ನೆಲೆ ಇಂದು ತಾಲೂಕಿನಲ್ಲಿ ಮುಂಜಾನೆಯಿಂದ ವ್ಯಾಪಾರ-ವಹಿವಾಟು ಜೋರಾಗಿದೆ.
ಲಾಕ್‌ಡೌನ್‌ನಿಂದ ಅಥಣಿ ಮುಕ್ತಿ.. ಪುನಾರಂಭಗೊಂಡ ವ್ಯಾಪಾರ-ವಹಿವಾಟು - Athani belgavi latest news
ಕೊರೊನಾ ಅಟ್ಟಹಾಸ ಹಿನ್ನೆಲೆ ವ್ಯಾಪಾರಸ್ಥರ ಸಂಘದವರು ಸ್ವಯಂ ಘೋಷಿತವಾಗಿ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿದ್ದರು. 20 ದಿನಗಳ ಬಳಿಕ ಇಂದು ಎಲ್ಲವೂ ಪುನಾರಂಭಗೊಂಡಿದೆ..

ಬೆಳಗಾವಿ ಜಿಲ್ಲೆಯ ಗೋಕಾಕ್, ಮೂಡಲಗಿ, ಅಥಣಿ, ಕಾಗವಾಡ ಹಾಗೂ ನಿಪ್ಪಾಣಿ ತಾಲೂಕುಗಳ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ ಜಾರಿಯಲ್ಲಿದ್ದ ಲಾಕ್‌ಡೌನ್ ನಿನ್ನೆ ತೆರವುಗೊಳಿಸಿ ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಅವರು ಆದೇಶ ಹೊರಡಿಸಿದ್ದಾರೆ. ಪರಿಣಾಮ ಇಂದು ಮುಂಜಾನೆ ಐದು ಗಂಟೆಯಿಂದ ಅಥಣಿ ಪಟ್ಟಣದಲ್ಲಿ ವಾಹನ ಸಂಚಾರ ಹಾಗೂ ವ್ಯಾಪಾರ-ವಹಿವಾಟು ಪುನರಾರಂಭಗೊಂಡಿವೆ.
ಕೊರೊನಾ ಅಟ್ಟಹಾಸ ಹಿನ್ನೆಲೆ ವ್ಯಾಪಾರಸ್ಥರ ಸಂಘದವರು ಸ್ವಯಂ ಘೋಷಿತವಾಗಿ ಪಟ್ಟಣದಲ್ಲಿ ವಾಣಿಜ್ಯ ಮಳಿಗೆಗಳನ್ನು ಬಂದ್ ಮಾಡಿದ್ದರು. 20 ದಿನಗಳ ಬಳಿಕ ಇಂದು ಎಲ್ಲವೂ ಪುನಾರಂಭಗೊಂಡಿದೆ. ಆದರೆ, ಮಹಾಮಾರಿ ರೋಗದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ಸಾಮಾಜಿಕ ಅಂತರ ನಿಯಮ ಪಾಲಿಸಬೇಕು ಮತ್ತು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕೆಂದು ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಸಾರ್ವಜನಿಕರಿಗೆ ಪ್ರಕಟಣೆಯಲ್ಲಿ ಮನವಿ ಮಾಡಿಕೊಂಡಿದ್ದಾರೆ.