ಬೆಳಗಾವಿ:ಜನತಾ ಕರ್ಫ್ಯೂ ಜಾರಿ ಹಿನ್ನೆಲೆಯಲ್ಲಿ ಸಗಟು ಹಣ್ಣಿನ ಮಾರುಕಟ್ಟೆಯಲ್ಲಿ ದೈಹಿಕ ಅಂತರ ಮರೆತು ಹಣ್ಣುಗಳ ಖರೀದಿಯಲ್ಲಿ ಜನರು ನಿರತರಾಗಿದ್ದರು.
ದೈಹಿಕ ಅಂತರ ಮರೆತು ಹಣ್ಣುಗಳ ಖರೀದಿಗೆ ಮುಗಿಬಿದ್ದ ಜನ - ಬೆಳಗಾವಿ ಹಣ್ಣಿನ ಮಾರುಕಟ್ಟೆಯಲ್ಲಿ ಕೋವಿಡ್ ನಿಯಮ ಉಲ್ಲಂಘನೆ,
ದೈಹಿಕ ಅಂತರ ಮರೆತು ಹಣ್ಣುಗಳ ಖರೀದಿಗೆ ಜನ ಮುಗಿಬಿದ್ದ ಘಟನೆ ಬೆಳಗಾವಿ ಮಾರುಕಟ್ಟೆಯಲ್ಲಿ ಕಂಡು ಬಂತು.
ಗಾಂಧಿನಗರದಲ್ಲಿರುವ ಹಣ್ಣಿನ ಮಾರ್ಕೆಟ್ನಲ್ಲಿ ಜನರು ಸರಿಯಾಗಿ ಮಾಸ್ಕ್ ಹಾಕಿಕೊಳ್ಳದೇ, ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ ಇರುವುದು ಗೋಚರಿಸಿತು.
ಮಾವಿನ ಹಣ್ಣಿನ ಸೀಸನ್ ಇರುವುದರಿಂದ ಮಹಾರಾಷ್ಟ್ರದ ರತ್ನಗಿರಿ, ದೇವಗಡ್ ಸೇರಿ ವಿವಿಧೆಡೆಯಿಂದ ವಿವಿಧ ಥಳಿಯ ಮಾವುಗಳು ಬೆಳಗಾವಿ ಹಣ್ಣಿನ ಮಾರುಕಟ್ಟೆಗೆ ಬಂದಿವೆ. ಆದ್ರೆ ಕೊರೊನಾ ತಡೆಗೆ ಕಠಿಣಕ್ರಮ ತೆಗೆದುಕೊಂಡಿರುವ ಸರ್ಕಾರ ನಿನ್ನೆಯಿಂದ 14 ದಿನಗಳ ಕಾಲ ಕೊರೊನಾ ಕರ್ಫ್ಯೂ ಘೋಷಣೆ ಮಾಡಿದೆ. ಆದರೂ ಎಚ್ಚೆತ್ತುಕೊಳ್ಳದ ಜನರು ಕೋವಿಡ್ ನಿಯಮಗಳನ್ನು ಕಾಯ್ದುಕೊಳ್ಳದೇ ಖರೀದಿಗೆ ಮುಗಿಬಿದ್ದಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮಹಾರಾಷ್ಟ್ರದಿಂದ ಆಗಮಿಸುವ ವರ್ತಕರು, ಲಾರಿ ಚಾಲಕರಿಂದ ಸೋಂಕು ಹರಡುವ ಭೀತಿ ಹೆಚ್ಚಾಗ್ತಿದೆ.