ಅಥಣಿ: ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ನಿಸರ್ಗ ಚಂಡಮಾರುತ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ಜಿಲ್ಲೆಯಲ್ಲಿ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ನಿಸರ್ಗ ಚಂಡ ಮಾರುತ ಎಫೆಕ್ಟ್.. ಅಥಣಿಯಲ್ಲಿ ಮೋಡಕವಿದ ವಾತಾವರಣ - Athani Nisarga cyclone News
ಪ್ರತಿ ವರ್ಷವೂ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ವಾಡಿಕೆಯಂತೆ ಈ ವಾರ ರೋಹಿಣಿ ಮಳೆ ಸುರಿಯುತ್ತಿರುವುದರಿಂದ ಕೃಷಿಕನ ಮೊಗದಲ್ಲಿ ಮಂದಹಾಸ ಮೂಡಿದೆ.
Nisarga cyclone Effect In Athani
ಅಥಣಿ ತಾಲೂಕಿನಲ್ಲಿ ಮೋಡಕವಿದ ವಾತಾವರಣ ನಿರ್ಮಾಣವಾಗಿದೆ. ಮುಂಜಾನೆಯಿಂದಲೇ ಭಾರಿ ಗಾಳಿ ಜೊತೆಗೆ ಅಲ್ಪಪ್ರಮಾಣದ ಮಳೆ ಬೀಳುತ್ತಿದೆ. ಪಕ್ಕದ ಮಹಾರಾಷ್ಟ್ರ ರಾಜ್ಯದ ರತ್ನಾಗಿರಿ, ಮಹಾಬಲೇಶ್ವರದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ.
ಪ್ರತಿ ವರ್ಷವೂ ಜೂನ್ ಮೊದಲ ವಾರದಲ್ಲಿ ಮಾನ್ಸೂನ್ ಆರಂಭವಾಗುತ್ತದೆ. ವಾಡಿಕೆಯಂತೆ ಈ ವಾರ ರೋಹಿಣಿ ಮಳೆ ಸುರಿಯುತ್ತಿರುವುದರಿಂದ ಕೃಷಿಕನ ಮೊಗದಲ್ಲಿ ಮಂದಹಾಸ ಮೂಡಿದೆ. ಅದರಂತೆ ತಾಲೂಕಿನ ಕೆಲಭಾಗದಲ್ಲಿ ರೈತರು ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.