ಬೆಳಗಾವಿ: ಸಚಿವ ರಮೇಶ್ ಜಾರಕಿಹೊಳಿ ಅವರ ಅಳಿಯ ಅಂಬಿರಾವ್ ಪಾಟೀಲ್ ದಬ್ಬಾಳಿಕೆಗೆ ಸ್ವಾಮೀಜಿಯೊಬ್ಬರು ಮಠವನ್ನೇ ಬಿಟ್ಟು ಹೋಗಿದ್ದಾರೆ ಎನ್ನಲಾಗ್ತಿದೆ. ಗೋಕಾಕ್ ನಗರದ ಯೋಗಿ ಕೊಳ್ಳದಲ್ಲಿರುವ ನಿರ್ವಾಣೇಶ್ವರ ಮಠದ ಶ್ರೀ ವೀರಭದ್ರ ಸ್ವಾಮೀಜಿ ಮಠಕ್ಕೆ ಬೀಗ ಹಾಕಿ ಊರು ಬಿಟ್ಟು ಹೋಗಿದ್ದಾರೆ.
ಸಚಿವ ರಮೇಶ್ ಜಾರಕಿಹೊಳಿ ಅಳಿಯನ ದಬ್ಬಾಳಿಕೆಗೆ ಬೇಸತ್ತು ಮಠ ತ್ಯಜಿಸಿದ ಸ್ವಾಮೀಜಿ?
ಜಮೀನು ಮಾರಾಟದ ಹಣ ಸ್ವಾಮೀಜಿಗೆ ಸಿಗದಂತೆ ಒತ್ತಡ ಹೇರಿರುವ ಆರೋಪ ಅಂಬಿರಾವ್ ವಿರುದ್ಧ ಕೇಳಿ ಬಂದಿದೆ. ಅಂಬಿರಾವ್ ಪಾಟೀಲ್ ಹಾಗೂ ಪ್ರಮುಖರಿಂದ ಸ್ವಾಮಿಜಿ ಕಿರುಕುಳ ಆರೋಪದ ಹಿನ್ನೆಲೆಯಲ್ಲಿ ಮಠಕ್ಕೆ ಬೀಗ ಹಾಕಿ ವೀರಭದ್ರೇಶ್ವರ ಸ್ವಾಮೀಜಿ ಊರು ಬಿಟ್ಟು ಹೋಗಿದ್ದಾರೆ ಎಂದು ಹೇಳಲಾಗ್ತಿದೆ.
ನಿರ್ವಾಣೇಶ್ವರ ಮಠ
ನಿರ್ವಾಣೇಶ್ವರ ಮಠವು ಅವಧೂತ ಪರಂಪರೆ ಹೊಂದಿದೆ. 15 ವರ್ಷಗಳಿಂದ ಮಠದ ಪೀಠಾಧಿಪತಿಯಾಗಿ ಶ್ರೀ ವೀರಭದ್ರ ಸ್ವಾಮೀಜಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಎರಡು ವರ್ಷಗಳ ಹಿಂದೆ ಪೂರ್ವಾಶ್ರಮದ ಆಸ್ತಿಯ ವ್ಯಾಜ್ಯ ಇತ್ಯರ್ಥವಾಗಿತ್ತು.