ಬೆಳಗಾವಿ: ನಗರದಲ್ಲಿ ಇಂದೂ ಸಹ ಕೊರೊನಾ ಮಹಾಮಾರಿ ಅಟ್ಟಹಾಸ ಮುಂದುವರೆಸಿದ್ದು, ಇಲ್ಲಿನ ಸದಾಶಿವನಗರದ ಸ್ಮಶಾನದಲ್ಲಿ ಏಕಕಾಲಕ್ಕೆ 9 ಮೃತದೇಹಗಳ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಬೆಳಗಾವಿ : ಏಕಕಾಲಕ್ಕೆ 9 ಕೋವಿಡ್ ಶವಗಳ ಸಾಮೂಹಿಕ ಅಂತ್ಯಕ್ರಿಯೆ - ಕೊರೊನಾ ಭೀಕರತೆಗೆ ಸಿಲುಕಿರುವ ಬೆಳಗಾವಿ
ಕೋವಿಡ್‌ನಿಂದ ಮೃತಪಟ್ಟ ಮಹಿಳಾ ಶವಕ್ಕೆ ಪಿಪಿಇ ಕಿಟ್ ಹಾಕದೇ ಬೀಮ್ಸ್ ನಿರ್ಲಕ್ಷ್ಯವಹಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಪಿಇ ಕಿಟ್ ಹಾಕದಿರುವ ಪರಿಣಾಮ ಮತ್ತಷ್ಟು ಜನರಿಗೆ ಕೋವಿಡ್ ಹರಡುವ ಆತಂಕ ಎದುರಾಗಿದೆ..

Covid dead
ಕೊರೊನಾ ಭೀಕರತೆಗೆ ಸಿಲುಕಿರುವ ಬೆಳಗಾವಿಯಲ್ಲಿ ಇಂದು ಕೂಡ ಏಕಕಾಲಕ್ಕೆ 9 ಕೊರೊನಾ ಹಾಗೂ ಕೊರೊನಾ ಶಂಕಿತ ಮೃತದೇಹಗಳ ಸಾಮೂಹಿಕ ಅಂತ್ಯಕ್ರಿಯೆ ಮಾಡಲಾಗುತ್ತಿದ್ದು, ಬೆಳಗಾವಿಯ ಬೀಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಮೃತಪಟ್ಟಿರುವವರ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.
ಇತ್ತ ಕೊರೊನಾ ರೋಗಕ್ಕೆ ಸಾವನ್ನಪ್ಪಿದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೋವಿಡ್‌ನಿಂದ ಮೃತಪಟ್ಟ ಮಹಿಳಾ ಶವಕ್ಕೆ ಪಿಪಿಇ ಕಿಟ್ ಹಾಕದೇ ಬೀಮ್ಸ್ ನಿರ್ಲಕ್ಷ್ಯವಹಿಸಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಪಿಇ ಕಿಟ್ ಹಾಕದಿರುವ ಪರಿಣಾಮ ಮತ್ತಷ್ಟು ಜನರಿಗೆ ಕೋವಿಡ್ ಹರಡುವ ಆತಂಕ ಎದುರಾಗಿದೆ.