ಕರ್ನಾಟಕ

karnataka

ETV Bharat / state

7 ತಿಂಗಳ ಹೆಣ್ಣುಮಗು ಸೇರಿ ಬೆಳಗಾವಿಯ 9 ಮುಂದಿ ಕೊರೊನಾದಿಂದ ಗುಣಮುಖ.. - ಕೊರೊನಾ ಸೋಂಕಿತರು ಗುಣಮುಖ

ಏಳು ತಿಂಗಳ ಮಗುವಿನ ಆರೈಕೆಯಲ್ಲಿದ್ದ ತಂದೆ ಹಾಗೂ ತಾಯಿಯ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ.

Belagavi
Belagavi

By

Published : Jun 1, 2020, 8:40 PM IST

ಬೆಳಗಾವಿ:ಕೋವಿಡ್-19 ಸೋಂಕು ತಗುಲಿದ್ದ ಏಳು ತಿಂಗಳ ಹೆಣ್ಣು ಮಗು ಸೇರಿ 9 ಮಂದಿ ಸಂಪೂರ್ಣವಾಗಿ ಗುಣಮುಖರಾಗಿ ಇಂದು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜಿಲ್ಲೆಯ ವಿವಿಧ ಭಾಗದ 9 ಜನ ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಬಿಮ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

ಏಳು ತಿಂಗಳ ಮಗುವಿನ ಆರೈಕೆಯಲ್ಲಿದ್ದ ತಂದೆ ಹಾಗೂ ತಾಯಿಯ ವರದಿ ಕೂಡ ನೆಗೆಟಿವ್ ಬಂದಿರುವುದರಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಪಿ-1226, ಪಿ-1227, ಪಿ-1489, ಪಿ-1490ಪಿ-1491, ಪಿ-1492, ಪಿ-1493, ಪಿ-1496 (ಏಳು ತಿಂಗಳ ಹೆಣ್ಣು ಮಗು)ಪಿ-1562 ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ABOUT THE AUTHOR

...view details