ಬೆಳಗಾವಿ :ಮೂರು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವ ವಿವಾಹಿತೆ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಬೆಳಗಾವಿಯ ಶಹಾಪುರದ ಅಲ್ವಾನ್ ಗಲ್ಲಿಯಲ್ಲಿ ನಡೆದಿದೆ. ಜ್ಯೋತಿ ಲಕ್ಷ್ಮಿಕಾಂತ್ ಯಲ್ಲಾರಿ(19) ಮೃತ ದುರ್ದೈವಿ.
ಬೆಳಗಾವಿಯ ಬಸವನಗಲ್ಲಿಯ ನಿವಾಸಿಯಾಗಿರುವ ಲಕ್ಷ್ಮಿಕಾಂತ ಹಾಗೂ ಜ್ಯೋತಿ ಒಬ್ಬರನೊಬ್ಬರು ಪ್ರೀತಿಸುತ್ತಿದ್ದರು. ಅಂತರ್ಜಾತಿ ಆದರೂ ಕುಟುಂಬದ ವಿರೋಧದ ಮಧ್ಯೆ 3 ತಿಂಗಳ ಹಿಂದೆಯಷ್ಟೇ ಇಬ್ಬರೂ ಮದುವೆ ಆಗಿದ್ದರು. ಮದುವೆ ನಂತರ ಜ್ಯೋತಿಗೆ ಪತಿ ಲಕ್ಷ್ಮಿಕಾಂತ ಹಾಗೂ ಕುಟುಂಬಸ್ಥರು ಕಿರುಕುಳ ನೀಡುತ್ತಿದ್ದರು. ನನ್ನ ಮಗಳನ್ನು ಪತಿ ಸೇರಿ ಕುಟುಂಬಸ್ಥರೇ ಕೊಲೆ ಮಾಡಿದ್ದಾರೆ ಎಂದು ಯುವತಿ ಪೋಷಕರು ಆರೋಪಿಸುತ್ತಿದ್ದಾರೆ.