ಚಿಕ್ಕೋಡಿ : ಈಗಾಗಲೇ ಕಾಗವಾಡ ತಾಲೂಕಿನ ಜನತೆಗೆ ಸರ್ಕಾರಿ ಕಚೇರಿಗಳಿಲ್ಲದೆ ತುಂಬಾ ತೊಂದರೆಗಳಾಗುತ್ತಿವೆ. ಬರುವ ವರ್ಷದೊಳಗೆ ಕಾಗವಾಡ ತಾಲೂಕಿನಲ್ಲಿ ಕಚೇರಿಗಳನ್ನು ಪ್ರಾರಂಭಿಸಲಾಗುವುದು ಎಂದು ಜವಳಿ ಮತ್ತು ಅಲ್ಪಸಂಖ್ಯಾತರ ಖಾತೆ ಸಚಿವ ಶ್ರೀಮಂತ ಪಾಟೀಲ ಹೇಳಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ನೂತನ ತಾಲೂಕು ಪಂಚಾಯಿತಿ ಕಾರ್ಯಾಲಯವನ್ನು ಉದ್ಘಾಟಿಸಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ತಾಲೂಕು ಪಂಚಾಯಿತಿ ಕಚೇರಿ ಆದದ್ದು ಸಂತೋಷವಾಗಿದೆ. ಏಕೆಂದರೆ ಬಹಳಷ್ಟು ಜನರಿಗೆ ಯಾವುದೇ ಕೆಲಸ ಆಗಬೇಕಾದರೆ ಅಥಣಿಗೆ ಹೋಗಬೇಕಾಗಿತ್ತು. ಜನರಿಗೆ ಬಹಳಷ್ಟು ಕಷ್ಟ ಆಗುತ್ತಿತ್ತು. ಈಗ ಈ ಕಚೇರಿ ಕಾಗವಾಡದಲ್ಲಿ ಆಗಿರುವುದರಿಂದ ಜನರಿಗೆ ಅನೂಕುಲವಾಗಿದೆ ಎಂದರು.