ಕರ್ನಾಟಕ

karnataka

ETV Bharat / state

ಕುಂದಾನಗರಿಯಲ್ಲಿ ರಾಜ್ಯದ ಮೊದಲ ಪೊಲೀಸ್ ಮ್ಯೂಸಿಯಂ ನಿರ್ಮಾಣ.. ಇದರೊಳಗೆ ಅಂಥಾದ್ದೇನೈತಿ?

ಈ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡ್ತೀವಿ..

police-museum
ಪೊಲೀಸ್ ಮ್ಯೂಸಿಯಂ

By

Published : Aug 18, 2021, 5:51 PM IST

ಬೆಳಗಾವಿ :ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ನಗರದಲ್ಲಿ ನೂತನ ಪೊಲೀಸ್ ಮ್ಯೂಸಿಯಂ ಸ್ಥಾಪಿಸಲಾಗಿದೆ. ಇದನ್ನು ಡಿಜಿಪಿ ಪ್ರವೀಣ್ ಸೂದ್ ಉದ್ಘಾಟಿಸಿದ್ದಾರೆ.

ನಗರದ ಪೊಲೀಸ್ ಹೆಡ್‌ಕ್ವಾರ್ಟರ್ಸ್​ನಲ್ಲಿ ನಿರ್ಮಿಸಿರುವ ಪೊಲೀಸ್ ವಸ್ತು ಸಂಗ್ರಹಾಲಯದಲ್ಲಿ ಇಲಾಖೆ ಈ ಮೊದಲು ಬಳಸುತ್ತಿದ್ದ ಉಪಕರಣ, ಸಮವಸ್ತ್ರ, ನಿಷ್ಕ್ರಿಯವಾದ ಗ್ರೆನೇಡ್‌ಗಳು, ಎಫ್‌ಎಸ್‌ಎಲ್ ಹಾಗೂ ಇನ್ವೆಸ್ಟಿಗೇಷನ್ ಕಿಟ್‌ಗಳು, ಪೊಲೀಸ್ ಬ್ಯಾಂಡ್‌ನಲ್ಲಿ ಬಳಸುತ್ತಿದ್ದಂತಹ ವಾದ್ಯವೃಂದದ ಹಳೆಯ ಉಪಕರಣಗಳನ್ನು ಸಂಗ್ರಹಿಸಿಡಲಾಗಿದೆ.

ಎಸ್‌ಪಿ ಲಕ್ಷ್ಮಣ್ ನಿಂಬರಗಿ

ಈ ಹಿಂದೆ ಪೊಲೀಸರು ಧರಿಸುತ್ತಿದ್ದ ಸಮವಸ್ತ್ರ, ಗಲಭೆ ನಿಯಂತ್ರಿಸಲು ಬಳಸುತ್ತಿದ್ದ ಹಳೆಯ ಹೆಲ್ಮೆಟ್, ಲಾಠಿ, ರಕ್ಷಣಾ ಕವಚ, ಮೆಟಲ್ ಡಿಟೆಕ್ಟರ್, ಈ ಹಿಂದೆ ಬಾಂಬ್ ನಿಷ್ಕ್ರಿಯ ದಳ ಬಳಸುತ್ತಿದ್ದ ಉಪಕರಣಗಳು ಸೇರಿದಂತೆ ಹಲವು ವಸ್ತುಗಳು ಇದರಲ್ಲಿ ಪ್ರದರ್ಶನಕ್ಕಿವೆ.

ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ ಅವರಿಗೆ ಈ ರೀತಿ ಪೊಲೀಸ್ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕೆಂಬ ಆಲೋಚನೆ ಬಂದಿದೆ. ನಂತರ ಅವರು ನಗರದ ಮರಾಠಾ ಲೈಟ್ ಇನ್ಫೆಂಟ್ರಿ ಅಧಿಕಾರಿಗಳನ್ನು ಸಂಪರ್ಕಿಸಿ ಅವರ ಸಲಹೆ ಪಡೆದು‌ ಇದನ್ನು ಸ್ಥಾಪಿಸಿದ್ದಾರೆ.

ಪೊಲೀಸ್ ಮ್ಯೂಸಿಯಂ

ಈ ಕುರಿತು ಮಾತನಾಡಿದ ಬೆಳಗಾವಿ ಎಸ್‌ಪಿ ಲಕ್ಷ್ಮಣ್ ನಿಂಬರಗಿ, ಬೆಳಗಾವಿ ಹಳೆಯ ಜಿಲ್ಲೆ. ಬ್ರಿಟಿಷರ ಕಾಲದಲ್ಲಿಯೂ ಇದು ಜಿಲ್ಲಾ ಕೇಂದ್ರವಾಗಿತ್ತು‌. ಇಲ್ಲಿರುವ ಪೊಲೀಸ್ ಇಲಾಖೆಗೆ 120 ವರ್ಷಗಳ ಇತಿಹಾಸವಿದೆ. ಈ ಹಿಂದಿನ ಇತಿಹಾಸ ಹಾಗೂ ವಾಸ್ತವ ಮತ್ತು 120 ವರ್ಷಗಳ ಇತಿಹಾಸದಲ್ಲಿ ಆದ ಬದಲಾವಣೆ ಬಗ್ಗೆ ಜನರಿಗೆ ತಿಳಿ ಹೇಳುವ ಸಣ್ಣ ಪ್ರಯತ್ನವೇ‌ ಪೊಲೀಸ್ ವಸ್ತು ಸಂಗ್ರಹಾಲಯ ಎಂದರು.

ಸುವ್ಯವಸ್ಥಿತ :ಈ ಮ್ಯೂಸಿಯಂನಿಂದ ಮುಂಬರುವ ಪೊಲೀಸ್ ಪ್ರಶಿಕ್ಷಣಾರ್ಥಿಗಳಿಗೂ ಅನುಕೂಲವಾಗುತ್ತೆ. ಇದರ ಎದುರು 1972ರಲ್ಲಿ ಬಳಸುತ್ತಿದ್ದ ಮೂವಿಂಗ್ ರಿಪೇರ್ ಬಸ್ ಸಹ ಇಡಲಾಗಿದೆ. ಯಾವುದಾದರೂ ಪೊಲೀಸ್ ವಾಹನ ಕೆಟ್ಟು ಹೋದರೆ, ಆ ಸ್ಥಳಕ್ಕೆ ಹೋಗಿ ವಾಹನ ರಿಪೇರಿ ಮಾಡುವ ಕೆಲಸಕ್ಕೆ ಇದನ್ನು ಬಳಸಲಾಗುತ್ತಿತ್ತಂತೆ.

ಈ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವ ಬಗ್ಗೆ ಮುಂದಿ‌ನ ದಿನಗಳಲ್ಲಿ ತೀರ್ಮಾನಿಸಲಾಗುವುದು. ಶಾಲೆಗಳು ಆರಂಭವಾದ ಬಳಿಕ ತಿಂಗಳಲ್ಲಿ ಒಂದೆರಡು ದಿನ ಒಂದೊಂದು ಶಾಲೆಯ ವಿದ್ಯಾರ್ಥಿಗಳ ವೀಕ್ಷಣೆಗೆ ವ್ಯವಸ್ಥೆ ಮಾಡುವ ಚಿಂತನೆ ಇದೆ.‌ ಮುಂಬರುವ ದಿನಗಳಲ್ಲಿ ನಮಗೆ ಲಭ್ಯವಾಗುವ ಹಳೆಯ ಉಪಕರಣಗಳನ್ನು ಸುವ್ಯವಸ್ಥಿತವಾಗಿ ಇಡುವಂತಹ ವ್ಯವಸ್ಥೆ ಮಾಡ್ತೀವಿ ಎಂದು ತಿಳಿಸಿದ್ದಾರೆ.

ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದ ರೀತಿ ನಿಜಕ್ಕೂ ಆಶ್ಚರ್ಯ :ಆಧುನಿಕ ತಂತ್ರಜ್ಞಾನ ಬೆಳೆಯುವ ಕಾಲದಲ್ಲಿ ಅಪರಾಧ ಪ್ರಕರಣಗಳೂ ಕೂಡ ಬೆಳೆಯುತ್ತಾ ಹೋಗುತ್ತಿವೆ. ಆದ್ರೆ, ಕೆಲಮೊಮ್ಮೆ ತಂತ್ರಜ್ಞಾನ ಬೆಳೆದಿದ್ದರೂ ಅಪರಾಧ ಪ್ರಕರಣಗಳನ್ನ ಪತ್ತೆ ಹಚ್ಚಲು ಕಷ್ಟಸಾಧ್ಯ ಆಗುತ್ತಿದೆ. ಇಂತಹ ಸಂದರ್ಭದಲ್ಲಿ ಪೊಲೀಸರು ಈ ಹಳೆಯ ಪರಿಕರಗಳನ್ನೇ ಬಳಸಿ ಈ ಹಿಂದೆ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುತ್ತಿದ್ದ ರೀತಿ ನಿಜಕ್ಕೂ ಚಕಿತಗೊಳಿಸುವಂತಿವೆ.

ಓದಿ:RSS ನವರು ಭಾರತದ ನಿಜವಾದ ತಾಲಿಬಾನಿಗಳು: ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ

ABOUT THE AUTHOR

...view details