ಬೆಳಗಾವಿ: ನಗರದ ಶನಿವಾರ ಕೂಟದಲ್ಲಿರುವ ಹೋಟೆಲ್ವೊಂದರಲ್ಲಿ ಇಂದು ಮಧ್ಯಾಹ್ನ 12ಕ್ಕೆ ಸಿಲಿಂಡರ್ ಸೋರಿಕೆಯಾಗಿದ್ದು, ಅಲ್ಲಿನ ಮಹಿಳಾ ಕೆಲಸಗಾರರ ತುರ್ತು ಕ್ರಮದಿಂದ ಭಾರೀ ಅನಾಹುತವೊಂದು ತಪ್ಪಿದೆ.
ಹೊಸ ಸಿಲಿಂಡರ್ ಜೋಡಿಸುವಾಗ ಹಾರಿದ ಸ್ಕ್ರೂ... ಬೆಳಗಾವಿಯಲ್ಲಿ ತಪ್ಪಿತು ಭಾರಿ ಅನಾಹುತ - news kannada
ಹೋಟೆಲ್ವೊಂದರಲ್ಲಿ ಹೊಸ ಸಿಲಿಂಡರ್ ಸೋರಿಕೆಯಾಗಿದ್ದು ಗಾಬರಿಗಳೊಗಾದ ಕೆಲಸಗಾರರು ಅಲ್ಲಿಂದ ಹೊರಗೆ ಓಡಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ಶನಿವಾರ ಕೂಟದಲ್ಲಿರುವ ಹೋಟೆಲ್ನಲ್ಲಿ ಹೊಸ ಸಿಲಿಂಡರ್ ಸೋರಿಕೆ
ಹೊಸ ಸಿಲಿಂಡರ್ಅನ್ನು ಸ್ಟೌಗೆ ಜೋಡಿಸುವಾಗ ಸ್ಕ್ರೂ ಕಿತ್ತು ಬಂದಿದ್ದರಿಂದ ಒಳಗಿದ್ದ ಗ್ಯಾಸ್ ಹೊರಗೆ ಬರತೊಡಗಿತು. ಗಾಬರಿಯಾದ ಮಹಿಳಾ ಕೆಲಸಗಾರರು ಸಿಲಿಂಡರ್ ಕ್ಯಾಪ್ಅನ್ನು ಒತ್ತಿ ಹಿಡಿದಿದ್ದಲ್ಲದೆ ತಕ್ಷಣ ಸಮೀಪವೇ ಇದ್ದ ಒಲೆಗಳನ್ನು ಬಂದ್ ಮಾಡಿದ್ದಾರೆ. ಬಳಿಕ ಹೋಟೆಲ್ ಕಿಟಕಿಗಳನ್ನು ತೆರೆದು ಗ್ಯಾಸ್ ಹೊರಗೆ ಹೋಗಲು ಬಿಟ್ಟಿದ್ದಾರೆ.
ಗಾಬರಿಗಳೊಗಾದ ಕೆಲಸಗಾರರು ಅಲ್ಲಿಂದ ಹೊರಗೆ ಓಡಿದ್ದಾರೆ. ನಂತರ ಸಿಲಿಂಡರ್ಅನ್ನು ಹೇಗೋ ಹೊರಗೆ ಸಾಗಿಸಲಾಯಿತು. ಈ ಬಗ್ಗೆ ಸುದ್ದಿ ತಿಳಿದು ಖಡೇಬಜಾರ್ ಪೋಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ.