ಕರ್ನಾಟಕ

karnataka

ETV Bharat / state

ನಾನಾಗಲಿ, ನನ್ನ ಅಳಿಯನಿಗಾಗಲಿ ಭ್ರಷ್ಟಾಚಾರ ಮಾಡಿ ಗೊತ್ತಿಲ್ಲ.. ರಮೇಶ್‌ ಜಾರಕಿಹೊಳಿ - ಶಾಸಕ ರಮೇಶ ಜಾರಕಿಹೊಳಿ‌

ಗೋಕಾಕ್‌ ನೂತನ ಬಿಜೆಪಿ ಶಾಸಕ ರಮೇಶ್​​ ಜಾರಕಿಹೊಳಿ ಇಂದು ಮಾತನಾಡಿ ಗೋಕಾಕಿನ ನಗರಸಭೆಯಲ್ಲಾದ ಭ್ರಷ್ಟಾಚಾರಕ್ಕೂ ನಮಗೂ ಯಾವ ಸಂಬಂಧವಿಲ್ಲ. ನಾನಾಗಲೀ ನನ್ನ ಅಳಿಯನಾಗಲಿ ಯಾವುದೇ ಭ್ರಷ್ಟಾಚಾರವನ್ನೂ ಮಾಡಿಲ್ಲ ಎಂದಿದ್ದಾರೆ.

Ramesh Jarakiholi
ರಮೇಶ್​​ ಜಾರಕಿಹೊಳಿ ಪ್ರತಿಕ್ರಿಯೆ

By

Published : Dec 10, 2019, 6:32 PM IST

ಬೆಳಗಾವಿ:ನಾನಾಗಲಿ,‌ ನನ್ನ ಅಳಿಯಂದಿರಾಗಲಿ, ಯಾವುದೇ ಭ್ರಷ್ಟಾಚಾರವನ್ನ ಈವರೆಗೂ ಮಾಡಿಲ್ಲ ಎಂದು ಗೋಕಾಕ್‌ ನೂತನ ಶಾಸಕ ರಮೇಶ್ ಜಾರಕಿಹೊಳಿ‌ ಹೇಳಿದ್ದಾರೆ.

ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ್ ನಗರ ಸಭೆಯಲ್ಲಾದ ಭ್ರಷ್ಟಾಚಾರ ಆರೋಪ ಬಗ್ಗೆ ತನಿಖೆಗೆ ಆಗ್ರಹಿಸುತ್ತೇನೆ. ಇಲ್ಲಿ ನಮ್ಮ ಮೇಲೆ ಕೂಡ ಭ್ರಷ್ಟಾಚಾರ ಆರೋಪ ಮಾಡಲಾಗಿದೆ. ನಾನಾಗಲಿ, ನನ್ನ ಅಳಿಯಂದಿರಾಗಲಿ, ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಈ ಬಗ್ಗೆ ತನಿಖೆ ನಡೆಸಿ ಭ್ರಷ್ಟಾಚಾರಿಗಳಿಗೆ ಶಿಕ್ಷೆ ಕೊಡಲಿ ಎಂದರು.

ಗೋಕಾಕ್‌ ನೂತನ ಬಿಜೆಪಿ ಶಾಸಕ ರಮೇಶ್​​ ಜಾರಕಿಹೊಳಿ..

ಇಂದು ಬೆಂಗಳೂರಿನಲ್ಲಿ ಎಲ್ಲಾ ನೂತನ ಬಿಜೆಪಿ ಶಾಸಕರು ಹಾಗೂ ಸೋತ ಬಿಜೆಪಿ ಅಭ್ಯರ್ಥಿಗಳು ಸೇರಿ ಚರ್ಚೆ ನಡೆಸಲಿದ್ದೇವೆ. ಕಳೆದ ಒಂದೂವರೆ ತಿಂಗಳಿಂದ ನಾವು ಸೇರಿರಲಿಲ್ಲ. ಹೀಗಾಗಿ ಇಂದು ರಾತ್ರಿ ಅಥವಾ ನಾಳೆ ಎಲ್ಲರೂ ಸೇರುತ್ತಿದ್ದೇವೆ. ಎಂಟಿಬಿ ನಾಗರಾಜ್, ಹೆಚ್.ವಿಶ್ವನಾಥ್‌ಗೆ ಅನ್ಯಾಯವಾಗಿದೆ. ಅವರಿಗೂ ಒಳ್ಳೆಯ ಸ್ಥಾನಮಾನ ಕೊಡಿಸುತ್ತೇವೆ ಎಂದು ಭರವಸೆ ನೀಡಿದರು.

ನೀರಾವರಿ ಬಗ್ಗೆ ಮಾತನಾಡಿದ ರಮೇಶ್‌ ಜಾರಕಿಹೊಳಿ, ನೀರಾವರಿ ಯೋಜನೆ ಬರೀ ಗೋಕಾಕ್ ಕ್ಷೇತ್ರಕಷ್ಟೇ ಮಾತ್ರವಲ್ಲ, ಇಡೀ ರಾಜ್ಯಕ್ಕೆ ಅನುಕೂಲ ಆಗುವಂತೆ ಮಾಡುತ್ತೇನೆ ಅಂತಾ ಹೇಳುವ ಮೂಲಕ ಪರೋಕ್ಷವಾಗಿ ತಮಗೆ ಜಲಸಂಪನ್ಮೂಲ ಖಾತೆ ಸಿಗುವ ಮುನ್ಸೂಚನೆ ನೀಡಿದರು.

ABOUT THE AUTHOR

...view details