ಕರ್ನಾಟಕ

karnataka

ETV Bharat / state

ರೈತರು, ಪ್ರವಾಹ ಸಂತ್ರಸ್ತರಿಗೆ ಮೈಕ್ರೋ ಫೈನಾನ್ಸ್​ ಸಂಸ್ಥೆಗಳ ನೋಟಿಸ್​: ಚಿಕ್ಕೋಡಿಯಲ್ಲಿ ಪ್ರತಿಭಟನೆ - ಮೈಕ್ರೋ ಫೈನಾನ್ಸ್

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ತಹಶೀಲ್ದಾರ್​ ಕಚೇರಿ ಮುಂದೆ ಬ್ಯಾಂಕ್​ ಹಾಗೂ ಫೈನಾನ್ಸ್​ ಕಿರುಕುಳ ಖಂಡಿಸಿ ಪ್ರತಿಭಟನೆ ನಡೆಸಿದ ನೆರೆ ಸಂತ್ರಸ್ತರು. ಕೂಡಲೇ ಕ್ರಮ ತೆಗೆದುಕೊಳ್ಳುವಂತೆ ಒತ್ತಾಯಿಸಿ ತಹಶೀಲ್ದಾರ್​ಗೆ ಮನವಿ ಸಲ್ಲಿಸಿದರು.

ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಪ್ರತಿಭಟನೆ

By

Published : Oct 1, 2019, 8:07 AM IST

ಚಿಕ್ಕೋಡಿ: ಮೈಕ್ರೋ ಫೈನಾನ್ಸ್​ ಹಾಗೂ ಬ್ಯಾಂಕ್​ನವರು ಸಾಲ ಮರುಪಾವತಿಸುವಂತೆ ರೈತರಿಗೆ ಹಾಗೂ ಪ್ರವಾಹ ಸಂತ್ರಸ್ತರಿಗೆ ನೋಟಿಸ್ನೀಡಿರುವ ಕ್ರಮ​ ಖಂಡಿಸಿ ಚಿಕ್ಕೋಡಿ ತಹಸೀಲ್ದಾರ ಕಚೇರಿ ಎದುರು ಸಂತ್ರಸ್ತರು ಹಾಗೂ ರೈತರು ಸೋಮವಾರ ಪ್ರತಿಭಟನೆ ನಡೆಸಿದರು.

ಸರ್ಕಾರದ ವಿರುದ್ಧ ನೆರೆ ಸಂತ್ರಸ್ತರ ಪ್ರತಿಭಟನೆ

ಮೈಕ್ರೋ ಫೈನಾನ್ಸ್​ನವರು ನಿತ್ಯ ಮನೆಗೆ ಬಂದು ಹಣ ನೀಡುವಂತೆ ಮಹಿಳೆಯರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಡಿಸೆಂಬರ್​ವರಗೆ ಯಾವುದೇ ಬ್ಯಾಂಕ್​ ಸಾಲ ಮರುಪಾವತಿಸುವಂತೆ ಒತ್ತಾಯ ಮಾಡಬಾರದು ಎಂದು ಸರ್ಕಾರ ಹೇಳಿದೆ. ಆದರೂ ಬ್ಯಾಂಕ್​ನಿಂದ ನೋಟಿಸ್​ ನೀಡಲಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕೂಡಲೇ ನೋಟಿಸ್​ ನೀಡುತ್ತಿರುವ ಬ್ಯಾಂಕ್​ ಹಾಗೂ ಕಿರುಕುಳ ನೀಡುತ್ತಿರುವ ಫೈನಾನ್ಸ್​ಗಳ ವಿರುದ್ಧ ಸೂಕ್ತಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ತಹಶೀಲ್ದಾರ್​ ಸಂತೋಷ ಬಿರಾದರ ಅವರಿಗೆ ಮನವಿ ಸಲ್ಲಿಸಿದರು.

ABOUT THE AUTHOR

...view details