ಚಿಕ್ಕೋಡಿ:ಬೆಳಗಾವಿ ಜಿಲ್ಲಾಡಳಿತದಿಂದ ಕಾಟಾಚಾರಾದ ಪ್ರವಾಹ ನಿರ್ವಹಣೆ ಹಾಗೂ ಗಂಜಿ ಕೇಂದ್ರಗಳ ಸ್ಥಾಪನೆ ಮಾಡಿದ್ದು, ಗಂಜಿ ಕೇಂದ್ರಕ್ಕೆ ಬೀಗ ಹಾಕಿರುವ ಕಾರಣ ಸಂತ್ರಸ್ತರು ಈ ಕಡೆ ಸುಳಿಯದಂತಹ ಸ್ಥಿತಿ ನಿರ್ಮಾಣವಾಗಿದೆ.
ಗಂಜಿ ಕೇಂದ್ರಗಳತ್ತ ಸುಳಿಯದ ನೆರೆ ಸಂತ್ರಸ್ತರು: ಬೆಳಗಾವಿ ಜಿಲ್ಲಾಡಳಿತದ ನಿರ್ಲಕ್ಷ್ಯ ಆರೋಪ
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಪ್ರಾರಂಭಿಸಿರುವ ಪ್ರವಾಹ ನಿರ್ವಹಣೆ ಹಾಗೂ ಗಂಜಿ ಕೇಂದ್ರಗಳ ಸ್ಥಳಕ್ಕೆ ಇಲ್ಲಿಯವರೆಗೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಈಗಾಗಲೇ ಇಲ್ಲಿಗೆ ಬೀಗ ಹಾಕಿರುವುದರಿಂದಾಗಿ ಸಂತ್ರಸ್ತರು ಈ ಕಡೆ ಸುಳಿಯದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಗಂಜಿ ಕೇಂದ್ರ ಸ್ಥಳಕ್ಕೆ ಬೀಗ ಹಾಕಿರುವುದು
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದಲ್ಲಿ ಪ್ರಾರಂಭಿಸಿರುವ ಪ್ರವಾಹ ನಿರ್ವಹಣೆ ಹಾಗೂ ಗಂಜಿ ಕೇಂದ್ರಗಳ ಸ್ಥಳಕ್ಕೆ ಇಲ್ಲಿಯವರೆಗೆ ಸಂಬಂಧಿಸಿದ ಯಾವೊಬ್ಬ ಅಧಿಕಾರಿಯೂ ಭೇಟಿ ನೀಡಿಲ್ಲ. ಯಡೂರವಾಡಿ ಗ್ರಾಮದಲ್ಲಿ 300ಕ್ಕೂ ಹೆಚ್ಚು ಜನರನ್ನ ನಿನ್ನೆ ಎಸ್ಡಿಆರ್ಎಫ್ ತಂಡ ಸ್ಥಳಾಂತರಿಸಿತ್ತು. ಅಧಿಕಾರಿಗಳು ಹಾಗೂ ಸಂತ್ರಸ್ತರ ನಡುವೆ ಹೊಂದಾಣಿಕೆ ಕೊರತೆಯಾಗಿದ್ದು, ಇಷ್ಟು ಸಮಯವಾದರೂ ಕೂಡಾ ಗಂಜಿ ಕೇಂದ್ರದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದರಿಂದಾಗಿ ಯಾವುದೇ ಸಂತ್ರಸ್ತರು ಈ ಕಡೆ ಸುಳಿಯದಂತಹ ಸ್ಥಿತಿ ತಲುಪಿದೆ.