ಬೆಳಗಾವಿ: ಅಜ್ಜನ ಜೊತೆಗೆ ಮರದ ಕೆಳಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಬೇವಿನ ಮರ ಧರೆಗೆ ಉರುಳಿದ ಪರಿಣಾಮ ಬಾಲಕಿ ಮೃತಪಟ್ಟಿದ್ದು ಇಬ್ಬರಿಗೆ ಗಂಭೀರ ಗಾಯವಾಗಿದೆ.
ಗಾಳಿಗೆ ಬಿದ್ದ ಬೇವಿನ ಮರ : ಬಾಲಕಿ ಸಾವು ಇಬ್ಬರಿಗೆ ಗಾಯ - undefined
ಬೇವಿನ ಮರ ಧರೆಗೆ ಉರುಳಿದ ಪರಿಣಾಮ ಬಾಲಕಿ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಗಾಯವಾದ ಘಟನೆ ಸವದತ್ತಿ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.
ಬಾಲಕಿ ಸಾವು
ಮಕ್ಕಳನ್ನು ಆಟವಾಡಿಸಲು ಮನೆಯ ಮುಂದಿರುವ ಗಿಡದೆ ಕೆಳಗೆ ತೆರಳಿದಾಗ ಗಾಳಿಗೆ ಬೇವಿನ ಮರ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಸ್ಥಳದಲ್ಲೇ ಹೆಣ್ಣು ಮಗು ಮೃತಪಟ್ಟಿದ್ದು ಮರದ ಬುಡಕ್ಕೆ ಸಿಲುಕಿದ ಅಜ್ಜ ಹಾಗೂ ಮತ್ತೊಬ್ಬ ಮೊಮ್ಮಗಳನ್ನು ಸಾರ್ವಜನಿಕರು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೃಹತ್ ಬೇವಿನ ಮರ ಗಾಳಿಗೆ ಬಿದ್ದಿದ್ದು ಕೆಳಗೆ ಇದ್ದ ಮೊಬೈಲ್ ಅಂಗಡಿ ಕೂಡ ಸಂಪೂರ್ಣ ಜಖಂ ಆಗಿದೆ.
ಮುರಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.