ಕರ್ನಾಟಕ

karnataka

By

Published : Jul 27, 2021, 12:55 AM IST

ETV Bharat / state

ತಗ್ಗಿದ ಮಳೆ : ರಾಷ್ಟ್ರೀಯ ಹೆದ್ದಾರಿ 4 ಸಂಚಾರಕ್ಕೆ ಮುಕ್ತ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಇಂದು ಮಳೆ ತಗ್ಗಿದ್ದರಿಂದ ಮತ್ತೆ ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾಗಿದೆ. ಸಾಲುಗಟ್ಟಲೆ ನಿಂತಿದ್ದ ವಾಹನಗಳು ಮತ್ತೆ ಪ್ರಯಾಣ ಬೆಳೆಸಿವೆ.

ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ
ರಾಷ್ಟ್ರೀಯ ಹೆದ್ದಾರಿ ಸಂಚಾರಕ್ಕೆ ಮುಕ್ತ

ಚಿಕ್ಕೋಡಿ: ಮಹಾರಾಷ್ಟ್ರದಲ್ಲಿ ಭಾರಿ ಮಳೆಯಿಂದಾಗಿ ಬೆಳಗಾವಿ‌ ಜಿಲ್ಲೆಯ ನಿಪ್ಪಾಣಿ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿತ್ತು. ಇದೀಗ ಮಳೆ ಪ್ರಮಾಣ ಕಡಿಮೆಯಾಗಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರಕ್ಕೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಸಂಚಾರ ಮುಕ್ತವಾಗಿದೆ.

ಕಳೆದ ವಾರದ ನಿರಂತರ ಮಳೆಯಾಗಿದ್ದು, ಜನ ಜೀವನ ಅಸ್ತವ್ಯಸ್ತವಾಗುವ ಜೊತೆಗೆ ಭೀಕರ ಪ್ರವಾಹದಿಂದ ಸಂಚಾರ ವ್ಯವಸ್ಥೆ ಕೂಡ ಸ್ಥಗಿತವಾಗಿತ್ತು.

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಇಂದು ಮಳೆ ತಗ್ಗಿದ್ದರಿಂದ ಮತ್ತೆ ಹೆದ್ದಾರಿ ಪ್ರಯಾಣಕ್ಕೆ ಮುಕ್ತವಾಗಿದೆ. ಸಾಲುಗಟ್ಟಲೆ ನಿಂತಿದ್ದ ವಾಹನಗಳು ಮತ್ತೆ ಪ್ರಯಾಣ ಬೆಳೆಸಿವೆ.

ಮಹಾಮಳೆಯಿಂದ ಕೃಷ್ಣಾ ನದಿ ಸೇರಿದಂತೆ ರಾಜ್ಯದ ಬಹುತೇಕ ನದಿಗಳು ತುಂಬಿ ಪ್ರವಾಹ ಉಂಟಾಗಿದ್ದು, ನದಿ ತೀರದ ನೂರಾರು ಗ್ರಾಮಗಳ ಜನರು ಮೂರಾಬಟ್ಟೆಯಾಗಿದೆ. ಕೆಲವು ಗ್ರಾಮಗಳು ಜಲಾವೃತಗೊಂಡಿದ್ದು ಜನರು ರಕ್ಷಣೆಗಾಗಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಇದನ್ನು ಓದಿ:ಕೃಷ್ಣಾ ನದಿ ಪ್ರವಾಹಕ್ಕೆ ಸಿಲುಕಿ ರೈತ ನೀರುಪಾಲು

ABOUT THE AUTHOR

...view details