ಚಿಕ್ಕೋಡಿ(ಬೆಳಗಾವಿ):ಕಾಂಗ್ರೆಸ್ ಸರ್ಕಾರದ ಕಪ್ಪು ಹಣದಿಂದ ಕರ್ನಾಟಕಕ್ಕೆ ತುಂಬಾ ನಷ್ಟ ಸಂಭವಿಸಿದೆ. ಕಾಂಗ್ರೆಸ್ನಿಂದ ಯುವಕರ ಕನಸು ಚೂರು ಚೂರು ಆಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ವಿಕಾಸ ಹೊಸ ದಾರಿಯಲ್ಲಿ ಹೋಗುವಂತೆ ಮಾಡಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದರು.
ವಿಶ್ವಗುರು ಬಸವೇಶ್ವರ ನಮಗೆ ಕೇಂದ್ರ ಬಿಂದು 2014 ರಿಂದ ನಮಗೆ ನೀವು ಅವಕಾಶ ಮಾಡಿ ಕೊಟ್ಟಿದ್ದೀರಿ. ಒಳ್ಳೆಯ ಜನಸೇವೆ ನಾವು ನೀಡಿದ್ದೇವೆ ಕಾಂಗ್ರೆಸ್ ಸರ್ಕಾರ ಆಡಳಿತಾವಧಿಯಲ್ಲಿ ಭ್ರಷ್ಟಾಚಾರ ನಡೆಯುತಿತ್ತು, ಬಸವೇಶ್ವರ ದಾರಿಯಲ್ಲಿ ನಾವು ಸರ್ಕಾರ ನಡೆಸುತ್ತಿದ್ದೇವೆ. ಕಾಂಗ್ರೆಸ್ ನವರ ಭ್ರಷ್ಟ ಹಣಕ್ಕೆ ನಾನು ತಡೆ ನೀಡಿದ್ದೇನೆ. ಇದರಿಂದ ಕಾಂಗ್ರೆಸ್ ನವರು ನನ್ನ ಬೈಯುತ್ತಾರೆ, ಮೋದಿಗೆ ಗೋರಿ ತೊಡುತ್ತಿದ್ದಾರೆ ಇದರಿಂದ ಅವರಿಗೆ ನೀವು ಅವಕಾಶ ಮಾಡಿ ಕೊಡಬೇಡಿ ಅವರು ಬೆಣ್ಣೆ ಎಲ್ಲಿ ಸಿಗುತ್ತೆ ಎಂದು ನೊಡುತ್ತಿದ್ದಾರೆ. ಅದಕ್ಕೆ ನೀವು ಅವಕಾಶ ಮಾಡಿ ಕೊಡಬೇಡಿ ಎಂದು ಮತದಾರರಿಗೆ ಮನವಿ ಮಾಡಿದರು.
ಸಕ್ಕರೆ ಜಿಲ್ಲೆ ಬೆಳಗಾವಿ ಇಲ್ಲಿ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಾರೆ ನಿಮ್ಮ ಶ್ರಮಕ್ಕೆ ನಮ್ಮ ಸರ್ಕಾರ ಹೆಚ್ಚಿನ ಆದ್ಯತೆ ನೀಡಿ ಕಬ್ಬಿಗೆ ಎಫ್ಆರ್ಪಿ ದರವನ್ನು ಹೆಚ್ಚು ಮಾಡಿ ರೈತರ ಏಳಿಗೆ ಹೊಂದಲು ನಮ್ಮ ಡಬಲ್ ಇಂಜಿನ್ ಸರ್ಕಾರ ಬದ್ಧವಾಗಿದೆ. ಈಗಾಗಲೇ ಬಜೆಟ್ನಲ್ಲಿ ಎಫ್ಆರ್ಪಿಗೆ ಹತ್ತು ಸಾವಿರ ಕೋಟಿ ರೂಪಾಯಿಯನ್ನು ಮೀಸಲು ಇಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಬೆಳೆದ ಕಬ್ಬು ಒಣಗಿ ಹಾಳಾಗುತಿತ್ತೂ, ಆ ಸರ್ಕಾರದಲ್ಲಿ ಎಫ್ಆರ್ಪಿ ಅತಿ ಕಡಿಮೆ ಕೊಡುತಿದ್ದರು ಆದರೆ ಬಿಜೆಪಿ ಸರ್ಕಾರ ಇನ್ನು ಮುಂದೆ ಕಬ್ಬು ಬೆಳೆಗಾರರಿಗೆ ಹೇಚ್ಚಿನ ಪ್ರಾಮುಖ್ಯತೆ ನೀಡಿದೆ ಎಂದು ತಿಳಿಸಿದರು.
ವಿರಾಟ್ ಜನಸಾಗರ ನೋಡಿ ನಾನು ಧನ್ಯೋಸ್ಮಿಯಾಗಿದ್ದೇನೆ. ನೀವು ಇಷ್ಟು ಜನ ನನಗೆ ಬೆಂಬಲ ನೀಡಿದ್ದೀರಿ ಈ ಬಾರಿ ನಿಮ್ಮ ನಿರ್ಧಾರದಿಂದ ಬಹುಮತದ ಬಿಜೆಪಿ ಸರ್ಕಾರ ರಚನೆಯಾಗಬೇಕು. ಇದರೊಂದಿಗೆ ರಾಷ್ಟ್ರೀಯ ವಿಕಾಸ ನಿರ್ಮಾಣ ಆಗಬೇಕು ಎಂದು ಹೇಳಿದರು. ವೀರ ಮಾತೆ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಶಿವಾಜಿ ಮಹಾರಾಜರು ಎಲ್ಲಾ ರಾಷ್ಟ್ರ ಪ್ರೇಮಿಗಳಿಗೆ ವಂದನೆ ಸಲ್ಲಿಸಿ, ರಾಜಹಂಸಗಡ ಶಿವಾಜಿ ಮೂರ್ತಿ ಪ್ರತಿಷ್ಠಾಪನೆ ನಮಗೆ ಸಿಕ್ಕ ಸುವರ್ಣ ಅವಕಾಶವಾಗಿದೆ ಎಂದರು.
ಇವತ್ತು ಬಿಜೆಪಿ ರಾಷ್ಟ್ರದ ದೊಡ್ಡ ಪಕ್ಷವಾಗಿದೆ ಬೆಳಗಾವಿ ಜಿಲ್ಲೆ ಬಿಜೆಪಿ ಅಭ್ಯರ್ಥಿಗಳ ಗೆಲುವು ಸಾಧಿಸಬೇಕು. ಇವತ್ತು ಡಬಲ್ ಇಂಜಿನ್ ಸರ್ಕಾರ ಇದೆ ಅನೇಕ ಯೋಜನೆ ರೂಪಿಸಲಾಗಿದೆ. ಇಲ್ಲಿನ ಸಂಸ್ಕೃತಿ ವಿಶೇಷವಾಗಿದೆ. ಡಬಲ್ ಇಂಜಿನ್ ಸರ್ಕಾರ ಹಲವು ಅಭಿವೃದ್ದಿ ಕಾರ್ಯಗಳನ್ನು ಮಾಡಿದೆ. ನಾನು ಇವತ್ತು ಬೆಳಗಾವಿಗೆ ಬಂದಿದ್ದೇನೆ. ಮತದಾನಕ್ಕೆ ಇನ್ನು ಹತ್ತು ದಿನ ಮಾತ್ರ ಉಳಿದಿದೆ. ದೇಶದಲ್ಲಿ ಕರ್ನಾಟಕವನ್ನು ನಂಬರ್ ಒನ್ ಮಾಡುವುದಕ್ಕೆ ನೀವು ಮತ್ತೊಮ್ಮೆ ಬಿಜೆಪಿಗೆ ಅವಕಾಶ ಮಾಡಿ ಕೊಡಿ ಎಂದು ಜನರಲ್ಲಿ ಮನವಿ ಮಾಡಿದರು.