ಕರ್ನಾಟಕ

karnataka

ETV Bharat / state

ಅಧಿಕಾರ ದಾಹಕ್ಕೆ ಕಾಂಗ್ರೆಸ್​​ನವರು ಹುಚ್ಚರಾಗಿದ್ದಾರೆ: ಕಟೀಲ್ ವಾಗ್ದಾಳಿ - ನಳೀನ್ ಕುಮಾರ್ ಕಟೀಲ್

ಅಧಿಕಾರದ ಗದ್ದುಗೆ ಹಿಡಿಯುವ ಹುಚ್ಚಿನಲ್ಲಿ ಅವರು ಹುಚ್ಚರೇ ಆಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

Nalin Kumar Kateel
ನಳೀನ್ ಕುಮಾರ ಕಟೀಲ್

By

Published : Jan 29, 2023, 7:46 PM IST

ಕಾಂಗ್ರೆಸ್ ವಿರುದ್ಧ ಕಟೀಲ್ ವಾಗ್ದಾಳಿ...

ಚಿಕ್ಕೋಡಿ(ಬೆಳಗಾವಿ): ಮುಖ್ಯಮಂತ್ರಿ ಸ್ಥಾನಕ್ಕೇರಬೇಕು ಅಂತಾ ಶರ್ಟ್​, ಕೋಟು ಹೊಲಿಸಿದ ಕಾಂಗ್ರೆಸ್​​ ನಾಯಕರು ಮಾನಸಿಕ ಸ್ಥಿತಿಯನ್ನು ಕಳೆದುಕೊಂಡಿದ್ದಾರೆ. ಅವರು ಶಾಶ್ವತ ನಿರುದ್ಯೋಗಿಗಳಾಗಬೇಕು ಅಂತಾ ಏಕವಚನ ಪ್ರಯೋಗ ಮಾಡುತ್ತಿದ್ದಾರೆ. ಕರ್ನಾಟಕದ ರಾಜಕೀಯ ಸಂಸ್ಕೃತಿಯನ್ನು ಕೆಳಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಅಧಿಕಾರದ ಗದ್ದುಗೆ ಹಿಡಿಯುವ ಹುಚ್ಚಿನಲ್ಲಿ ಅವರು ಹುಚ್ಚರೇ ಆಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್​ನವರು ಹತಾಶರಾಗಿದ್ದಾರೆ..ಚಿಕ್ಕೋಡಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, 'ಸದ್ಯ ಬಿಜೆಪಿ ಪಕ್ಷದ ಕಾರ್ಯಕ್ರಮಗಳಲ್ಲಿ ಜನ ಬೆಂಬಲ ನೋಡಿ ಕಾಂಗ್ರೆಸ್​​ ನಾಯಕರು ಹತಾಶರಾಗಿದ್ದಾರೆ ಎಂದು ವ್ಯಂಗ್ಯವಾಡಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​​​ಗೆ ಕೆಟ್ಟ ಹುಳ, ಪಂಚಮಸಾಲಿ ನಾಯಕರಿಗೆ ನಿಂದಿಸಿದ ರಮೇಶ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತ, ಅದ್ಯಾವುದೇ ವಿಷಯವಿದ್ದರೂ ನಾನು ರಮೇಶ್ ಜಾರಕಿಹೊಳಿ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಹೇಳಿದರು.

ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆ ಎದುರಿಸುತ್ತೇವೆ..ಶನಿವಾರ ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಬಂದು ಎಲ್ಲರೊಡನೆ ಮಾತನಾಡಿದ್ದಾರೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಈ ಚುನಾವಣೆ ಎದುರಿಸುತ್ತೇವೆ. ಹಳೆ ಮೈಸೂರು ಭಾಗ, ಮಂಡ್ಯ ಹಾಗೂ ಹಾಸನದಲ್ಲಿ ಬಿಜೆಪಿ ಬಲಿಷ್ಠವಾಗಿ ಬೆಳೆಯುತ್ತಿದೆ. 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಕಟೀಲ್ ವಿಶ್ವಾಸ ವ್ಯಕ್ತಪಡಿಸಿದರು.

ಸಂಕಲ್ಪ ಯಾತ್ರೆ: ಕರ್ನಾಟದಲ್ಲಿ ಚುಣಾವಣೆ ಸಮರ ಪ್ರಾರಂಭವಾಗಿದೆ. ಭಾರತೀ ಜನತಾ ಪಕ್ಷ ಕಳೆದ ಆರು ತಿಂಗಳಿಂದ ಪೂರ್ವ ತಯಾರಿ ನಡೆಸಿದೆ. ಮುಖ್ಯಮಂತ್ರಿ ತಂಡ, ನನ್ನ ತಂಡ ಹಾಗೂ ಅರುಣ್ ಸಿಂಗ್ ತಂಡ ನೇತೃತ್ವದಲ್ಲಿ ರಾಜ್ಯದಲ್ಲಿ ಸಂಕಲ್ಪ ಯಾತ್ರೆ ನಡೆಸಿ ಕಾರ್ಯಕರ್ತರಿಗೆ ಎರಡು ಅಭಿಯಾನ ನೀಡಿದ್ದೇವೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರು ವಿಜಯಪುರಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿದ್ದಾರೆ. ಕರ್ನಾಟದಲ್ಲಿ ಮತ್ತೆ ಬಿಜೆಪಿ ಪರವಾಗಿ ವಾತಾವರಣ ನಿರ್ಮಾಣವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು.

ಕಾಂಗ್ರೆಸ್ ಮನೆ ಖಾಲಿ ಆಗುತ್ತೆ: ಸಿದ್ದರಾಮಯ್ಯ ಒಬ್ಬ ವಲಸಿಗ,‌ ಜೆಡಿಎಸ್​ ತುಳಿದು, ಒದ್ದು, ಗುರು ದೇವೇಗೌಡರನ್ನು ಅಡ್ಡಹಾಕಿ ಕಾಂಗ್ರೆಸ್ ಹೋಗಿದ್ದಾರೆ. ಅವರು ಕೂಡ ಒಬ್ಬ ವಲಸಿಗ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ನಿನ್ನೆ(ಶನಿವಾರ) ದಾವಣಗೆರೆ ನಗರದ ಶೇಖರಪ್ಪ ನಗರದಲ್ಲಿ ಜರುಗಿದ ವಿಜಯ್ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದರು.

70 ಶಾಸಕರು ಬೊಮ್ಮಾಯಿಯವರು ನೇತೃತ್ವದಲ್ಲಿ ಚುನಾವಣೆಗೆ ಹೋಗಲ್ಲ. ಬಿಎಸ್​ವೈಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಪತ್ರ ಬರೆದಿರುವುದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ. ಅದು ಹೈಕಮಾಂಡ್ ನೋಡಿಕೊಳ್ಳುತ್ತದೆ. ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ಚುನಾವಣೆಗೆ ಹೋಗುತ್ತೇವೆ ಎಂದರು.

ಇದನ್ನೂ ಓದಿ:ಸದ್ಯದಲ್ಲೇ ಕಾಂಗ್ರೆಸ್ ಮನೆ ಖಾಲಿ ಆಗುತ್ತೆ: ಹೊಸ ಬಾಂಬ್ ಸಿಡಿಸಿದ ನಳೀನ್ ಕುಮಾರ್ ಕಟೀಲ್

ABOUT THE AUTHOR

...view details