ಬೆಳಗಾವಿ:ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 17ರಿಂದ ನಾಯಕತ್ವ ಬದಲಾವಣೆ ಪ್ರಕ್ರಿಯೆ ಶುರು ಎಂಬ ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯತ್ನಾಳ್ ಅವರಿಗೆ ಈಗಾಗಲೇ ಪಕ್ಷದಿಂದ ಮೂರು ಬಾರಿ ನೋಟಿಸ್ ನೀಡಲಾಗಿದೆ. ಪಕ್ಷ ಕ್ರಮ ಕೈಗೊಳ್ಳುತ್ತೆ. ಶಾಸಕರನ್ನು ಉಚ್ಛಾಟನೆ ಮಾಡಬೇಕಿದ್ರೆ ಪಕ್ಷದಲ್ಲಿ ಕೆಲವು ನಿಯಮಗಳಿವೆ. ಅವುಗಳನ್ನು ನೋಡಿಕೊಂಡು ಪಕ್ಷ ನಿರ್ಧಾರ ಕೈಗೊಳ್ಳಲಿದ್ದು, ಜವಾಬ್ದಾರಿಯನ್ನು ತಿಳಿಸುವ ಕೆಲಸ ಮಾಡಿದೆ. ಪಕ್ಷ ಬಿ ಫಾರಂ ನೀಡಿದ ಶಾಸಕನಿಗೆ ಶಿಸ್ತುಕ್ರಮ ಕೈಗೊಳ್ಳಬೇಕಂದ್ರೆ ಅದಕ್ಕೂ ಸಂವಿಧಾನವಿದೆ. ಆ ಸಂವಿಧಾನದ ಆಧಾರದಲ್ಲಿ ಯತ್ನಾಳ್ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಅವರು ಹೇಳಿದಂತೆ ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ನಾಯಕತ್ವದ ಬದಲಾವಣೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ವಿರುದ್ಧವೂ ಯತ್ನಾಳ್ ವಾಗ್ದಾಳಿ ವಿಚಾರಕ್ಕೆ, ಈಗಾಗಲೇ ಯತ್ನಾಳ್ ಸಿದ್ಧ ಇದ್ರೆ ಪಕ್ಷ ಏನ್ ಮಾಡಬೇಕೋ ಅದು ಮಾಡುತ್ತದೆ. ಯತ್ನಾಳ್‌ಗೆ ನೋಟಿಸ್, ಏನು ಲವ್ ಲೆಟರ್ ಏನು ಗೊತ್ತಿಲ್ದಿದ್ರೆ ಏನ್ ಮಾಡಕ್ಕಾಗುತ್ತೆ ಎಂದು ಹೇಳಿದರು.