ಅಥಣಿ(ಬೆಳಗಾವಿ): ಒಂಭತ್ತನೆಯ ತಾರೀಖು ಮುಸ್ಲಿಂ ಸಮುದಾಯದ ಶಬೇಬರಾತ ಜಾಗರಣೆ ಮತ್ತು ಸಾಮೂಹಿಕ ಪ್ರಾರ್ಥನೆಯನ್ನು ತಮ್ಮ ಮನೆಗಳಲ್ಲಿಯೇ ಮಾಡಿ ಎಂದು ಸಮಾಜದ ಮುಖಂಡ ಅಸ್ಲಂ ನಾಲಬಂದ್ ಹೇಳಿದ್ದಾರೆ.
ಶಬೇಬರಾತ ಜಾಗರಣೆ ಮನೆಯಲ್ಲಿಯೇ ಮಾಡಿ: ಮುಸ್ಲಿಂ ಮುಖಂಡರ ಮನವಿ - belguam news
ಕೊರೊನಾ ವೈರಸ್ನಿಂದಾಗಿ ಮುಸ್ಲಿಂ ಸಮುದಾಯಕ್ಕೆ ನಮಾಜು ಮಾಡಲು ತೀವ್ರ ತೊಂದರೆ ಆಗಿದ್ದು, ಪ್ರತ್ಯೇಕ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದೆ. ಪ್ರತಿ ಮಸೀದಿಯಲ್ಲಿ ಮೂರರಿಂದ ನಾಲ್ಕು ಜನ ಮಾತ್ರ ಶಬೇಬರತ ರಾತ್ರಿ ನಮಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದವರು ತಮ್ಮ ಮನೆಗಳಲ್ಲಿಯೇ ನಮಾಜು ಮಾಡಬೇಕು ಎಂದು ಸಮಾಜದ ಮುಖಂಡ ಅಸ್ಲಂ ನಾಲಬಂದ್ ಮನವಿ ಮಾಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಕೊರೊನಾ ವೈರಸ್ನಿಂದಾಗಿ ಮುಸ್ಲಿಂ ಸಮುದಾಯಕ್ಕೆ ನಮಾಜು ಮಾಡಲು ತೀವ್ರ ತೊಂದರೆ ಆಗಿದ್ದು, ಪ್ರತ್ಯೇಕ ಮಸೀದಿಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಅಗತ್ಯ ಇದೆ. ಪ್ರತಿ ಮಸೀದಿಯಲ್ಲಿ ಮೂರರಿಂದ ನಾಲ್ಕು ಜನ ಮಾತ್ರ ಶಬೇಬರತ ರಾತ್ರಿ ನಮಾಜು ಮಾಡಲು ಅವಕಾಶ ಕಲ್ಪಿಸಲಾಗಿದೆ. ಉಳಿದವರು ತಮ್ಮ ಮನೆಗಳಲ್ಲಿಯೇ ನಮಾಜು ಮಾಡಬೇಕು ಎಂದು ಮನವಿ ಮಾಡಿದ್ದಾರೆ.
ಈ ಬಗ್ಗೆ ನಿನ್ನೆ ಪ್ರತ್ಯೇಕವಾಗಿ ಪ್ರತಿ ಮಸೀದಿಯಲ್ಲಿ ಧರ್ಮ ಗುರುಗಳ ಮೂಲಕ ಎಲ್ಲರಿಗೂ ಹೇಳಲಾಗಿದೆ. ಸಮಾಜದ ಜನರು ಪ್ರಾರ್ಥನೆ ಹೆಸರಲ್ಲಿ ಗುಂಪು ಕೂಡದಂತೆ ಮತ್ತು ಸಮೂಹದಲ್ಲಿ ಪ್ರಾರ್ಥನೆ ಮಾಡದಂತೆ ಈಗಾಗಲೇ ವಿನಂತಿಸಿದ್ದೇವೆ ಎಂದ ಅವರು, ತಬ್ಲಿಘ್ ಜಮಾತ್ ಬಗ್ಗೆ ಮುಸ್ಲಿಂ ಸಮುದಾಯದ ಜನರನ್ನು ಅವಹೇಳನಕಾರಿಯಾಗಿ ಮಾಧ್ಯಮಗಳಲ್ಲಿ ಬಿಂಬಿಸುತ್ತಿರುವುದು ನಮ್ಮ ಧರ್ಮದ ಜನರಿಗೆ ತೀವ್ರ ಮಾನಸಿಕ ಆಘಾತವಾಗುತ್ತಿದೆ. ದಯವಿಟ್ಟು ಜನರು ತಪ್ಪು ಮಾಹಿತಿಗಳಿಗೆ ಮತ್ತು ವದಂತಿಗಳಿಗೆ ಕಿವಿ ಕೊಡಬಾರದು ಮತ್ತು ಎಂದು ಮನವಿ ಮಾಡಿದರು.