ಬೆಳಗಾವಿ:ಕೊಲೆಯಾದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿವೋರ್ವನ ಮೃತದೇಹ ಬೆಳಗಾವಿ - ಗೋಕಾಕ್ ರಸ್ತೆಯ ಕಲ್ಯಾಳ್ ಪೂಲ್ ಬಳಿ ಪತ್ತೆಯಾಗಿದೆ.
ಬೆಳಗಾವಿ: ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ - dead body found in belagavi
ಬೆಳಗಾವಿಯಲ್ಲಿ ವ್ಯಕ್ತಿವೋರ್ವನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತನ ಹೆಸರು ತಿಳಿದು ಬಂದಿಲ್ಲ, ಈತನಿಗೆ ಸುಮಾರು 35 ವರ್ಷ ಎಂದು ಅಂದಾಜಿಸಲಾಗಿದೆ.
ಮೃತದೇಹ ಪತ್ತೆ
ಮೃತ ವ್ಯಕ್ತಿಯ ಹೆಸರು ತಿಳಿದು ಬಂದಿಲ್ಲ, ಈತನಿಗೆ ಸುಮಾರು 35 ವರ್ಷ ವಯಸ್ಸಿನವ ಎಂದು ಅಂದಾಜಿಸಲಾಗಿದೆ. ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಲಾಗಿದೆ. ಬೇರೆಡೆ ಹತ್ಯೆ ಮಾಡಿ ಶವ ಬಿಸಾಕಿ ಹೋಗಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಾರಿಹಾಳ ಠಾಣೆ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೊಬೈಲ್ ನೆಟ್ವರ್ಕ್ ಟ್ರೇಸ್ ಮಾಡಿ ಹಂತಕರ ಶೋಧಕ್ಕೆ ಪೊಲೀಸರು ಮುಂದಾಗಿದ್ದಾರೆ.