ಬೆಳಗಾವಿ: ತಲೆ ಮೇಲೆ ಕಲ್ಲು ಎತ್ತಿ ಹಾಕಿ ಆಟೋ ಚಾಲಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಹೊರವಲಯ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ನಡೆದಿದೆ.
ನಗರದ ನಿವಾಸಿ ನೋಹಾನ್ ಧಾರವಾಡಕರ್ (23) ಕೊಲೆಯಾದ ಆಟೋ ಚಾಲಕ. ಕಳೆದ 5 ದಿನಗಳ ಹಿಂದೆ ಮನೆಯಿಂದ ಆಟೋ ಸಮೇತ ತೆರಳಿದ್ದ ನೋಹಾನ್ ಮನೆಗೆ ವಾಪಸ್ ಆಗಿರಲಿಲ್ಲ. ಭಾನುವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ನಿರ್ಜನ ಪ್ರದೇಶದಲ್ಲಿ ಆತನ ಆಟೋ ಪತ್ತೆಯಾಗಿದೆ. ಈ ವೇಳೆ, ಹುಡುಕಾಟ ನಡೆಸಿದಾಗ ಪಾಳು ಬಿದ್ದ ಮನೆಯೊಂದರ ಶೌಚಾಲಯದಲ್ಲಿ ನೋಹಾನ್ ಶವ ಪತ್ತೆಯಾಗಿದೆ.