ಕರ್ನಾಟಕ

karnataka

ETV Bharat / state

ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ - Chikkodi latest crime news

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದ ಭರಮಾ ಭೂಪಾಲ ದುಪದಾಳೆ ಎನ್ನುವವರ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ.

Chikkodi
ಬೆಳಗಾವಿ: ಗುಂಡು ಹಾರಿಸಿ ವ್ಯಕ್ತಿ ಕೊಲೆ ಯತ್ನ

By

Published : Dec 17, 2020, 1:19 PM IST

ಚಿಕ್ಕೋಡಿ: ಗುಂಡು ಹಾರಿಸಿ ವ್ಯಕ್ತಿಯ ಕೊಲೆಗೆ ಯತ್ನಿಸಿರುವ ನಡೆದಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ನಡೆದಿದೆ.

ಗುಂಡು ಹಾರಿಸಿ ವ್ಯಕ್ತಿಯ ಕೊಲೆ ಯತ್ನ

ಯಮಕನಮರಡಿ ಗ್ರಾಮದ ಭರಮಾ ಭೂಪಾಲ ದುಪದಾಳೆ ಎನ್ನುವವರ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಗಾಯಾಳುವಿನ ತೋಳಿನ ಎಡ ಭಾಗಕ್ಕೆ ಗುಂಡು ತಾಗಿದೆ. ಕಳೆದ ರಾತ್ರಿ ಯಮಕನಮರಡಿ ಬಸದಿ ಹತ್ತಿರ ಕುಳಿತಿರುವಾಗ ಘಟನೆ ನಡೆದಿದೆ ಎನ್ನಲಾಗ್ತಿದೆ.

ಓದಿ:ರಾಯಬಾಗ: ಹಣ್ಣು ಮಾರುತ್ತಿದ್ದ ಮಹಿಳೆ ಮೇಲೆ ಅಪರಿಚಿತನಿಂದ ಆ್ಯಸಿಡ್​ ದಾಳಿ

ಮುಖಕ್ಕೆ ಮಾಸ್ಕ್​ ಹಾಕಿಕೊಂಡು ಬಂದ ದುಷ್ಕರ್ಮಿ ಗುಂಡು ಹಾರಿಸಿದ್ದಾನೆ ಎಂಬ ಮಾಹಿತಿ ಇದೆ.

ಈ ಬಗ್ಗೆ ಯಮಕನಮರಡಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌.

ABOUT THE AUTHOR

...view details