ಬೆಳಗಾವಿ:ಗಡಿ ಜಿಲ್ಲೆ ಬೆಳಗಾವಿಯ ಫ್ರಂಟ್‌ಲೈನ್ ವಾರಿಯರ್ಸ್‌ಗಳನ್ನು ಮಹಾಮಾರಿ ಕೊರೊನಾ ಬಿಟ್ಟು ಬಿಡದೇ ಕಾಡುತ್ತಿದ್ದು, ಕಿಲ್ಲರ್ ಕೊರೊನಾಗೆ ಮುಖ್ಯಪೇದೆಯೊಬ್ಬ ಬಲಿಯಾಗಿದ್ದಾರೆ.
ಕೊರೊನಾಗೆ ಮುರಗೋಡ ಠಾಣೆಯ ಮುಖ್ಯಪೇದೆ ಬಲಿ - head constable died from corona
ಬೆಳಗಾವಿ ಜಿಲ್ಲೆಯ ಮುರಗೋಡ ಠಾಣೆ ಮುಖ್ಯಪೇದೆ ಶಿವಾನಂದ ಕಡೇಮನಿ(47) ಕೊರೊನಾದಿಂದ ಸಾವನ್ನಪ್ಪಿದ್ದಾರೆ.

constable
ಜಿಲ್ಲೆಯ ಮುರಗೋಡ ಠಾಣೆ ಮುಖ್ಯಪೇದೆ ಶಿವಾನಂದ ಕಡೇಮನಿ(47) ಕೊರೊನಾದಿಂದ ಸಾವನ್ನಪ್ಪಿದ್ದವರು. ಕಳೆದ 25 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಶಿವಾನಂದ ಸೇವೆ ಸಲ್ಲಿಸುತ್ತಿದ್ದರು. ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಶಿವಾನಂದರನ್ನು ದಾಖಲಿಸಲಾಗಿತ್ತು. ಚಿಕಿತ್ಸೆ ಫಲಿಸದೇ ಮುಖ್ಯಪೇದೆ ಶಿವಾನಂದ ಕಡೇಮನಿ ಇಂದು ಮೃತರಾಗಿದ್ದಾರೆ. ಮುರಗೋಡ ಗ್ರಾಮದಲ್ಲಿ ಪೇದೆಯ ಅಂತ್ಯಕ್ರಿಯೆ ನಡೆಯಲಿದೆ.