ಕರ್ನಾಟಕ

karnataka

ETV Bharat / state

ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ - Mugalagoda village in the Rayabaga taluk of Belgaum district

ಯಲ್ಲಾಲಿಂಗೇಶ್ವರ 34 ಪುಣ್ಯಸ್ಮರಣೋತ್ಸವದ ಅಂಗವಾಗಿ 13 ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವ ಹಲವು ವಿಶೇಷಗಳಿಗೆ ಹೆಸರುವಾಸಿಯಾಗಿದೆ.

mugalakoda-jatra-mahostava
mugalakoda-jatra-mahostava

By

Published : Jan 11, 2020, 8:49 AM IST

ಚಿಕ್ಕೋಡಿ:ಮುಗಳಖೋಡದ ಲಿಂಗಕ್ಯ ಯಲ್ಲಾಲಿಂಗೇಶ್ವರ ಪ್ರಭು ಮಹಾರಾಜ ಮಠದ್ದು ಜಾತ್ಯತೀತ ಪರಂಪರೆ. ಭಕ್ತರ ಕಲ್ಪವೃಕ್ಷವಾಗಿ ಮಠ ಕಂಗೊಳಿಸುತ್ತಿದೆ. ಯಲ್ಲಾಲಿಂಗೇಶ್ವರ 34ನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ 13 ದಿನಗಳ ಕಾಲ ವಿಜೃಂಭಣೆಯಿಂದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ ನಡೆಯುತ್ತಿದೆ.

ಮುಗಳಖೋಡ ಮಠದಲ್ಲಿ 13 ದಿನಗಳ ಕಾಲ ವಿಜೃಂಭಣೆಯ ಜಾತ್ರಾ ಮಹೋತ್ಸವ

ಈ ಮಠಕ್ಕೆ ಅನೇಕ ವರ್ಷಗಳ ಇತಿಹಾಸವಿದೆ. ಈ ಮಠಕ್ಕೆ ಎಲ್ಲಾ ಧರ್ಮಿಯರು ಭಕ್ತರಾಗಿರುವುದು ಒಂದು ವಿಶೇಷ. ಲಿಂಗಕ್ಯ ಯಲ್ಲಾಲಿಂಗ ಮಹಾರಾಜರಿಗೆ 100 ವರ್ಷ ಮುಗಿದ ಮೇಲೆ 34ನೇ ವರ್ಷದ ಪುಣ್ಯಸ್ಮರಣೆ ನಡೆಯುತ್ತಿದೆ. ತೊಟ್ಟಿಲು ಮಹೋತ್ಸವ ಆಚರಣೆ ಮಾಡುತ್ತೇವೆ. 13 ದಿನಗಳ ಕಾಲ ಜಾತ್ರಾ ಮಹೋತ್ಸವ ನಡೆಯುತ್ತದೆ. ಅದರಲ್ಲಿ ಮಕ್ಕಳಿಲ್ಲದ ದಂಪತಿಗಳು ತೊಟ್ಟಿಲಿಗೆ ಉಡಿ ತುಂಬಿ ಆಶೀರ್ವಾದ ಪಡೆದು, ಮಕ್ಕಳ ಭಾಗ್ಯ ಪಡೆಯುತ್ತಾರೆ. ಈ ಮಹೋತ್ಸವದಲ್ಲಿ ಇಸ್ಲಾಂ ಧರ್ಮದವರು ಬಂದು ಆಶೀರ್ವಾದ ಪಡೆದುಕೊಂಡು ಹೋಗುವುದು ವಿಶೇಷ ಹಾಗೂ ನಮ್ಮ ರೈತರಿಗೆ ಒಳ್ಳೆಯ ಮಳೆಯಾಗಲಿ, ಮಳೆಗೆ ತಕ್ಕ ಬೆಳೆಗಳಾಗಲಿ, ಬೆಳೆಗೆ ಒಳ್ಳೆಯ ಬೆಲೆ ಸಿಗಲಿ ಎಂದು ಹಾರೈಸುವ ಜೊತೆಗೆ ಜಾತ್ರಾ ಮಹೋತ್ಸವದ ಹಲವು ವಿಶೇಷತೆಗಳನ್ನು ಹೊಂದಿದೆ ಎಂದು ಮುಗಳಕೋಡ ಪೀಠಾಧ್ಯಕ್ಷ ಡಾ. ಮುರಘರಾಜೇಂದ್ರ ಸ್ವಾಮೀಜಿ ಹೇಳಿದರು.

ಈ ಮುಗಳಖೋಡ ಮುತ್ಯಾನ ಮಠ ಎಂದು ಪ್ರಸಿದ್ಧಿ ಪಡೆದಿದೆ. ನಾವು ಹಲವಾರು‌ ಮಠಗಳನ್ನು ನೋಡಿದ್ದೇವೆ, ಕೇಳಿದ್ದೇವೆ. ಆದರೆ ರಾಯಬಾಗ ತಾಲೂಕಿನ ಮುಗಳಖೋಡ ಮಠ ಪರಂಪರೆ ಹಾಗೂ ಇತಿಹಾಸ ನಿರ್ಮಾಣ ಮಾಡಿದೆ ಎಂದರೆ ತಪ್ಪಾಗಲಾರದು. 21ನೇ ಶತಮಾನದಲ್ಲಿ ದಿನನಿತ್ಯ ಪ್ರಸಾದ, ದಾಸೋಹ ನೀಡುತ್ತಾ ಬಂದಿ ಎಂದು ಭಕ್ತರಾದ ಸಿದ್ದರಾಮ ಹೇಳಿದರು.

ABOUT THE AUTHOR

...view details