ಅಥಣಿ (ಬೆಳಗಾವಿ):ಮಹೇಶ್ ಕುಮಟಳ್ಳಿ ಸಹೋದರ ಹಲ್ಲಿನ ವೈದ್ಯನಾಗಿದ್ದು, ನೆರೆ ಸಂತ್ರಸ್ತರಿಗೆ ಯಾವುದೇ ರೀತಿಯ ವೈದ್ಯಕೀಯ ಪರೀಕ್ಷೆ ಮಾಡದೆ ಮಹೇಶ್ ಕುಮಟಳ್ಳಿಗೆ ಮತ ಹಾಕಿದ್ದ ಅಥಣಿಯ 83 ಸಾವಿರ ಜನರ 32 ಹಲ್ಲುಗಳನ್ನು ಕಿತ್ತಿದ್ದಾರೆ ಎಂದು ಮಾಜಿ ಸಚಿವ ಎಂ ಬಿ ಪಾಟೀಲ್ ವ್ಯಂಗ್ಯವಾಡಿದರು.
ಕುಮಟಳ್ಳಿ ಸಹೋದರ ಮತದಾರರ 32 ಹಲ್ಲುಗಳನ್ನೂ ಕಿತ್ತಿದ್ದಾರೆ: ಎಂ ಬಿ ಪಾಟೀಲ್ ವ್ಯಂಗ್ಯ - MB Patil speak against Mahesh Kumatalli
ಮಹೇಶ್ ಕುಮಟಳ್ಳಿ ರಾಮನ ತರ ರಥದ ಮೇಲೆ ಕುಳಿತಿದ್ದಾರೆ, ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೆ. ಪಾಪ ಲಕ್ಷ್ಮಣ್ ಸವದಿಗೆ ಈ ಅಧೋಗತಿ ಬರಬಾರದು ಎಂದು ಎಂ ಬಿ ಪಾಟೀಲ್, ಕಾಲೆಳೆದರು.
ಅಥಣಿ ಉಪಚುನಾವಣೆಯ ಕೈ ಅಭ್ಯರ್ಥಿ ಗಜಾನನ ಮಂಗಸೂಳಿ ಪರವಾಗಿ ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, ಮಹೇಶ್ ಕುಮಟಳ್ಳಿ ರಾಮನ ತರ ರಥದ ಮೇಲೆ ಕುಳಿತಿದ್ದಾರೆ, ಲಕ್ಷ್ಮಣ್ ಸವದಿ ಅದರ ಸಾರಥಿ ಅಂತೆ. ಪಾಪ ಲಕ್ಷ್ಮಣ್ ಸವದಿಗೆ ಈ ಅಧೋಗತಿ ಬರಬಾರದು ಎಂದು ಕಾಲೆಳೆದರು.
ಯಾರು ಬಯಸಿದ ಚುಣಾವಣೆ ಅಲ್ಲ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಟ್ಟು ಈ ಉಪಚುಣಾವಣೆ ನಡಿಯುತ್ತಿದೆ. ಇದಕ್ಕೆ ಕೋಟಿಗಟ್ಟಲೆ ಹಣ ಖರ್ಚಾಗುತ್ತದೆ. ಅದು ನಿಮ್ಮ ಹಣ. ನಿಮಗೆ ನೆನಪಿರಲಿ. ಇಲ್ಲಿ ನೆರೆ ಸಂತ್ರಸ್ತರರು ಸಾಯುತ್ತಿದ್ದರೆ ಮಹೇಶ್ ಕುಮಟಳ್ಳಿ ಬಾಂಬೆ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಆರಾಮಾಗಿದ್ರು ಎಂದು ಕಿಡಿಕಾರಿದರು.