ಬೆಳಗಾವಿ: ಕೆಲ ವರ್ಷಗಳಿಂದ ಕಾಣೆಯಾಗಿರುವ ಸಂಸದ ಅನಂತ್ ಕುಮಾರ್ ಹೆಗಡೆ ಅವರನ್ನು ಹುಡುಕಿಕೊಡುವಂತೆ ತಹಶೀಲ್ದಾರ್ ಅವರಿಗೆ ಕಿತ್ತೂರ ಕ್ಷೇತ್ರದ ಜನರು ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
'ಕಷ್ಟಕಾಲದಲ್ಲಿ ಎಲ್ಲಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ?' ಹುಡುಕಿಕೊಡುವಂತೆ ತಹಶೀಲ್ದಾರ್‌ಗೆ ಪತ್ರ - ಸಂಸದ ಅನಂತ್ ಕುಮಾರ್ ಹೆಗಡೆ ನಾಪತ್ತೆ
ಕೊರೊನಾ ಸಂದರ್ಭದಲ್ಲಿ ಚೆನ್ನಮ್ಮನ ಕಿತ್ತೂರಿನ ಜನರ ಕಷ್ಟಗಳಿಗೆ ಧ್ವನಿಯಾಗಬೇಕಿದ್ದ ಸಂಸದ ಹೆಗಡೆ ಕಾಣೆಯಾಗಿದ್ದಾರೆ. ಅವರನ್ನು ಹುಡಿಕಿಕೊಟ್ಟವರಿಗೆ ಸೂಕ್ತ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಬರೆದಿರುವ ಭಿತ್ತಿಪತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
!['ಕಷ್ಟಕಾಲದಲ್ಲಿ ಎಲ್ಲಿದ್ದಾರೆ ಸಂಸದ ಅನಂತ್ ಕುಮಾರ್ ಹೆಗಡೆ?' ಹುಡುಕಿಕೊಡುವಂತೆ ತಹಶೀಲ್ದಾರ್‌ಗೆ ಪತ್ರ ಸಂಸದ ಅನಂತ್ ಕುಮಾರ್ ಹೆಗಡೆ ನಾಪತ್ತೆ](https://etvbharatimages.akamaized.net/etvbharat/prod-images/768-512-11887390-thumbnail-3x2-abc.jpg)
ಸಂಸದ ಅನಂತ್ ಕುಮಾರ್ ಹೆಗಡೆ ನಾಪತ್ತೆ
ತಹಶೀಲ್ದಾರ್‌ಗೆ ಪತ್ರ ಬರೆದಿರುವ ಕಿತ್ತೂರಿನ ಜನರು, ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಎರಡನೇ ಅಲೆ ಮರಣ ಮೃದಂಗ ಬಾರಿಸುತ್ತಿದೆ. ಕ್ಷೇತ್ರದ ಜನರು ಸಾವು, ನೋವುಗಳ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ನೆರವಿಗೆ ಬರಬೇಕಾದ ಸಂಸದರು ಕೆಲ ವರ್ಷಗಳಿಂದ ಕಾಣೆ ಆಗಿದ್ದಾರೆ. ಹೀಗಾಗಿ ಅವರನ್ನು ಹುಡುಕಿ ಕೊಡುವಂತೆ ಪತ್ರ ಬರೆದಿದ್ದಾರೆ. ಸಂಸದರನ್ನು ಹುಡಿಕಿಕೊಟ್ಟವರಿಗೆ ಸೂಕ್ತವಾದ ಬಹುಮಾನ ಘೋಷಣೆ ಮಾಡಲಾಗುವುದು ಎಂದು ಭಿತ್ತಿಪತ್ರದಲ್ಲಿ ಬರೆಯಲಾಗಿದೆ.