ಬೆಳಗಾವಿ:ನೇಣು ಬಿಗಿದುಕೊಂಡು ತಾಯಿ, ಮಗ ಆತ್ಮಹತ್ಯೆಗೆ ಶರಣಾದ ಘಟನೆ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದಲ್ಲಿ ನಡೆದಿದೆ.
ನೇಣು ಬಿಗಿದುಕೊಂಡು ತಾಯಿ-ಮಗ ಆತ್ಮಹತ್ಯೆ!
ಬೆಳಗಾವಿ ಜಿಲ್ಲೆಯ ಹಲಗಾ ಗ್ರಾಮದಲ್ಲಿ ತಾಯಿ, ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಾಯಿ-ಮಗ ಆತ್ಮಹತ್ಯೆ
ಭಾರತಿ ಗರಾಣಿ(36), ಮಗ ಪ್ರಜ್ವಲ್(15) ನೇಣಿಗೆ ಶರಣಾದವರು. ಭಾರತಿ ಗರಾಣಿ ಅವರು ಹಲಗಾ ಗ್ರಾಮದಲ್ಲಿ ಬೇಕರಿ ನಡೆಸುತ್ತಿದ್ದರು. ಪ್ರಜ್ವಲ್ ಕೂಡ ಬೇಕರಿ ಕೆಲಸಕ್ಕೆ ತಾಯಿಗೆ ನೆರವಾಗುತ್ತಿದ್ದನು. ಆತ್ಮಹತ್ಯೆಗೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಈ ಕುರಿತು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಬ್ಬರ ಶವಗಳನ್ನು ಹಿರೇಬಾಗೇವಾಡಿ ಶವಾಗಾರಕ್ಕೆ ಹಸ್ತಾಂತರ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಶವಗಳನ್ನು ಹಸ್ತಾಂತರ ಮಾಡಲಾಗುತ್ತದೆ.