ಬೆಳಗಾವಿ: ಮಗನ ಮೇಲೆ ಚಿರತೆ ದಾಳಿ ನಡೆದ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ತಾಲೂಕಿನ ಖನಗಾವಿ ಕೆ.ಹೆಚ್.ಗ್ರಾಮದಲ್ಲಿ ನಡೆಯಿತು. ಇಂದು ಮಧ್ಯಾಹ್ನ ಜಾಧವ್ ನಗರದಲ್ಲಿ ಕಾರ್ಮಿಕ ಸಿದರಾಯಿ ಮಿರಜಕರ್ ಮೇಲೆ ಚಿರತೆ ದಾಳಿ ಮಾಡಿದ್ದು, ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದರು. ಆದ್ರೆ ಈ ವಿಷಯ ಕೇಳಿ ದಿಗ್ಭ್ರಾಂತರಾದ ತಾಯಿ ಶಾಂತಾ (65) ಅವರಿಗೆ ಹೃದಯಾಘಾತವಾಗಿದ್ದು, ಸಾವಿಗೀಡಾಗಿದ್ದಾರೆ. ಖನಗಾವಿ ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಮಗನ ಮೇಲೆ ಚಿರತೆ ದಾಳಿ; ಸುದ್ದಿ ಕೇಳಿ ಹೃದಯಾಘಾತದಿಂದ ತಾಯಿ ಸಾವು - ಈಟಿವಿ ಭಾರತ ಕನ್ನಡ
ಮಗನ ಮೇಲೆ ಚಿರತೆ ದಾಳಿ ಮಾಡಿರುವ ಸುದ್ದಿ ಕೇಳಿ ತಾಯಿ ಹೃದಯಾಘಾತದಿಂದ ಸಾವಿಗೀಡಾದ ಘಟನೆ ಬೆಳಗಾವಿಯಲ್ಲಿ ನಡೆದಿದೆ.
ವ್ಯಕ್ತಿ ಮೇಲೆ ಚಿರತೆ ದಾಳಿ
Last Updated : Aug 5, 2022, 8:09 PM IST