ಚಿಕ್ಕೋಡಿ(ಬೆಳಗಾವಿ):ಇಬ್ಬರು ಹೆಣ್ಣು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಯಭಾಗ ತಾಲೂಕಿನ ಸುಲ್ತಾನಪುರ ಗ್ರಾಮದ ಹೊರವಲಯದಲ್ಲಿ ಬುಧವಾರ ನಡೆದಿದೆ. ಸರಸ್ವತಿ ಕಿರವೆ (26), ಮಕ್ಕಳಾದ ದೀಪಿಕಾ (7), ರೀತಿಕಾ (4) ಮೃತರು. ಹಾರುಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾರಾಷ್ಟ್ರದ ಸಾಂಗ್ಲಿ ನಿವಾಸಿ ಕಿರಣ ಎಂಬವರ ಜೊತೆ 2016ರಲ್ಲಿ ಸರಸ್ವತಿ ವಿವಾಹವಾಗಿದ್ದರು. ಗಂಡನ ಕಿರುಕುಳಕ್ಕೆ ಬೇಸತ್ತು ತವರು ಮನೆ ಸುಲ್ತಾನಪುರಕ್ಕೆ ಬಂದಿದ್ದರು. ಇದೀಗ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಹೇಳಿದ್ದಾರೆ.