ಕರ್ನಾಟಕ

karnataka

ETV Bharat / state

ಬರಕ್ಕೆ ಬೇಸತ್ತು ಗುಳೆ ಹೋದ ರೈತನ ಮಗ ಮೊಸಳೆ ಬಾಯಿಗೆ ಸಿಕ್ಕಿ ಸಾವು - kannada news

ಬರಗಾಲದ ಬವಣೆಯಿಂದ ಜೀವನ ಸಾಗಿಸಲು ಊರು ಬಿಟ್ಟು ಹೋಗಿ ಕೆಲಸ ಮಾಡುತ್ತಿದ್ದ ರೈತನ ಮಗ ಮೊಸಳೆ ದಾಳಿಗೆ ಬಲಿಯಾಗಿದ್ದಾನೆ.

ಮೊಸಳೆ ದಾಳಿಗೆ ಬಾಲಕ ಬಲಿ

By

Published : May 17, 2019, 8:19 PM IST

ಚಿಕ್ಕೋಡಿ:ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಭೀಕರ ಬರಗಾಲವಿದ್ದು, ಜನ ಹೊಟ್ಟೆಪಾಡಿಗಾಗಿ ಮಹಾರಾಷ್ಟ್ರದ ಸಾಂಗಲಿ ಜಿಲ್ಲೆಗೆ ಗುಳೆ ಹೋಗಿದ್ದಾರೆ. ಸಾಂಗಲಿ ಪಟ್ಟಣ ಸಮೀಪದ ಮೌಜೆ ಡಿಗ್ರಜ ಗ್ರಾಮದಲ್ಲಿ ಕೆಲಸ ಮಾಡಿ ಕೃಷ್ಣಾ ತೀರಕ್ಕೆ ಸ್ನಾನಕ್ಕೆ ಹೋದಾಗ ಮೊಸಳೆ ದಾಳಿಗೆ ಒಳಗಾಗಿ ಬಾಲಕನೋರ್ವ ಮೃತಪಟ್ಟ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಭೀಕರ ಬರಗಾಲ ಎದುರಾಗಿದ್ದು, ಜನರು ಕೆಲಸವಿಲ್ಲದೆ ಸಾಂಗಲಿ, ಸಾತಾರಾ, ಕೊಲ್ಲಾಪುರ ಜಿಲ್ಲೆಗಳತ್ತ ಮುಖ ಮಾಡಿದ್ದಾರೆ. ಇಂಡಿ ತಾಲೂಕಿನ ನಿಂಬಾಳ ಆರ್.ಎಸ್.ಗ್ರಾಮದ ಮಾರುತಿ ಜಾಧವ್ ಎಂಬುವವರು ತಮ್ಮ ಕುಟುಂಬದೊಂದಿಗೆ ಗುಳೆ ಹೋಗಿದ್ದು, ಇಟ್ಟಗೆ ಕೂಲಿ ಕೆಲಸ ಮಾಡುತ್ತಿದ್ದರು. ಶಾಲೆಗೆ ರಜೆ ಇರುವುದರಿಂದ ಮಗನಾದ ಆಕಾಶ (12) ಕೂಡಾ ತೆರಳಿದ್ದು, ಎಂದಿನಂತೆ ಸ್ನಾನ ಮಾಡಲು ನದಿ ತೀರಕ್ಕೆ ಹೋಗಿದ್ದಾನೆ.

ಬಾಲಕ ನದಿಗೆ ಹೋದಾಗ ಮೊಸಳೆ ದಾಳಿ ಮಾಡಿ ಬಾಲಕನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದೆ. ಬಾಲಕನ ಚೀರಾಟದ ಶಬ್ದ ಕೇಳಿದ ನದಿ ತೀರದ ಜನರು ರಕ್ಷಣೆಗೆ ಮುಂದಾದರೂ ಕೂಡಾ ಮೊಸಳೆ ಬಾಲಕನನ್ನು ನದಿ ಆಳಕ್ಕೆ ಎಳೆದುಕೊಂಡು ಹೊಗಿದೆ. ಮಹಾರಾಷ್ಟ್ರದ ಹೆಲ್ಪ್​​ಲೈನ್ ಟೀಂ ಮತ್ತು ಅರಣ್ಯ ಇಲಾಖೆಯವರ ಸುದೀರ್ಘ ಕಾರ್ಯಾಚರಣೆಯ ನಂತರ ಬಾಲಕನ ಮೃತದೇಹವನ್ನು ಹೊರ ತೆಗೆಯಲಾಯಿತು. ಘಟನೆ ಕುರಿತು ಸಾಂಗಲಿ ಗ್ರಾಮೀಣ ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details