ಕರ್ನಾಟಕ

karnataka

ETV Bharat / state

5ಕ್ಕಿಂತ ಹೆಚ್ಚು ಕೋವಿಡ್​​ ಕೇಸ್​​ ಪತ್ತೆಯಾದರೆ ಗ್ರಾಮ ಸೀಲ್‌ಡೌನ್: ಬೆಳಗಾವಿ ಡಿಸಿ - ಜಿಲ್ಲಾಧಿಕಾರಿ‌ ಎಂ.ಜಿ. ಹಿರೇಮಠ ಹೇಳಿಕೆ

ಗ್ರಾಮೀಣ ಭಾಗದಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಪತ್ತೆಯಾದರೆ ಆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ‌ ಎಂ.ಜಿ. ಹಿರೇಮಠ ಹೇಳಿದರು.

DC MG Hiremath
ಬೆಳಗಾವಿ ಜಿಲ್ಲಾಧಿಕಾರಿ‌ ಎಂ.ಜಿ. ಹಿರೇಮಠ

By

Published : Jun 13, 2021, 4:19 PM IST

ಚಿಕ್ಕೋಡಿ: ಬೆಳಗಾವಿ, ಚಿಕ್ಕೋಡಿ, ರಾಯಬಾಗ, ಹುಕ್ಕೇರಿ ಹಾಗೂ ಅಥಣಿ ತಾಲೂಕಿನಲ್ಲಿ ಹೆಚ್ಚಾಗಿ ಕೊರೊನಾ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಪತ್ತೆಯಾದರೆ ಆ ಗ್ರಾಮವನ್ನು ಸೀಲ್‌ಡೌನ್ ಮಾಡಲಾಗುವುದು ಎಂದು ಬೆಳಗಾವಿ ಜಿಲ್ಲಾಧಿಕಾರಿ‌ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ‌ ಎಂ.ಜಿ. ಹಿರೇಮಠ ಹೇಳಿಕೆ

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ತಯಾರಾಗುತ್ತಿರುವ ಕೊರೊನಾ ಟೆಸ್ಟಿಂಗ್ ಲ್ಯಾಬ್ ಪರಿಶೀಲಿಸಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ನಗರ ಪ್ರದೇಶದಲ್ಲಿ 5ಕ್ಕಿಂತ ಹೆಚ್ಚು ಕೊರೊನಾ ರೋಗಿಗಳು ಪತ್ತೆಯಾದರೆ ಆ ಪ್ರದೇಶವನ್ನು ಈಗಾಗಲೇ ಅಧಿಕಾರಿಗಳು ಸೀಲ್​​​ಡೌನ್ ಮಾಡಿದ್ದಾರೆ. ಅಲ್ಲದೇ ಈವರೆಗೆ 8 ಹಳ್ಳಿಗಳನ್ನು ಸೀಲ್‌ಡೌನ್ ಮಾಡಲಾಗಿದೆ. ಹೀಗೆ ಸೀಲ್‌ಡೌನ್ ಮಾಡಿದರೆ ರೋಗ ಹರಡುವುದಿಲ್ಲ ಎಂದರು.

ಪಕ್ಕದ ರಾಜ್ಯಗಳಿಂದ ಬರುವವರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ವರದಿ ತರಬೇಕು. ರಾಯಭಾಗದ ಸಂವಸುದ್ದು ಗ್ರಾಮದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತಹ ಗ್ರಾಮಗಳಿಗೂ ಹೋಗಿ ತಪಾಸಣೆ ಮಾಡುತ್ತೇನೆ. ಈ ವಾರದಲ್ಲಿ ಚಿಕ್ಕೋಡಿ ಪಟ್ಟಣದಲ್ಲಿ ಕೊರೊನಾ ಟೆಸ್ಟಿಂಗ್ ಲ್ಯಾಬ್ ಆರಂಭವಾಗುತ್ತದೆ. ಹೀಗಾಗಿ ಈ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

ABOUT THE AUTHOR

...view details