ಕರ್ನಾಟಕ

karnataka

ETV Bharat / state

ಶಿಥಿಲಾವಸ್ಥೆ ತಲುಪಿದ 200 ವರ್ಷಗಳ ಹಳೆಯ ಶಾಸಕರ ಮಾದರಿ ಶಾಲೆ - ಶಿಥಿಲಗೊಂಡ ಚಿಕ್ಕೋಡಿಯ 200 ವರ್ಷಗಳ ಹಳೆಯ ಶಾಲೆ

ಚಿಕ್ಕೋಡಿ‌ ಮತಕ್ಷೇತ್ರದ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಶಾಸಕರ ಮಾದರಿ ಶಾಲೆಯಲ್ಲಿ 325 ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಕೊಠಡಿಗಳಿವೆ. ಆದರೆ, ಇಲ್ಲಿರುವ 8 ಕೊಠಡಿಗಳನ್ನ ಕೇಂದ್ರೀಯ ವಿದ್ಯಾಲಯಕ್ಕೆ ಹಾಗೂ 14 ಸರ್ಕಾರಿ ಪ್ರೌಢ ಶಾಲೆಗೆ ಕೊಡಲಾಗಿದೆ. ಪರಿಣಾಮ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕೊಠಡಿಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ..

chikkodi model school
ಚಿಕ್ಕೋಡಿ ಶಾಸಕರ ಮಾದರಿ ಶಾಲೆ

By

Published : Nov 22, 2021, 3:39 PM IST

ಚಿಕ್ಕೋಡಿ : ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾಗಿದ್ದ ಶಾಸಕರ ಮಾದರಿ ಶಾಲೆ ಈಗ ಶಿಥಿಲಾವಸ್ಥೆಗೆ ತಲುಪಿದೆ. ವಿದ್ಯಾರ್ಥಿಗಳು ಪ್ರಾಣ ಭಯದಲ್ಲಿ ಕುಳಿತು ಪಾಠ ಕೇಳುವ ಸ್ಥಿತಿ ನಿರ್ಮಾಣವಾಗಿದೆ.

ಶಿಥಿಲಾವಸ್ಥೆ ತಲುಪಿದ 200 ವರ್ಷಗಳ ಹಳೆಯ ಶಾಸಕರ ಮಾದರಿ ಶಾಲೆ..

ಪಟ್ಟಣದಲ್ಲಿ ತಾಲೂಕು ಪಂಚಾಯತ್‌ ಕಚೇರಿ ಎದುರಿಗೆ ಮಾದರಿ ಶಾಲೆ ಇದೆ. ಇದು ಬ್ರಿಟಿಷರ ಕಾಲದಲ್ಲಿ ಅಂದರೆ 1818ರಲ್ಲಿ ನಿರ್ಮಾಣವಾಗಿದೆ. ಶಾಲೆಯಲ್ಲಿ ಸುಮಾರು 325ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

11 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಈ ವರ್ಷದಿಂದ ಇಂಗ್ಲಿಷ್​​ ತರಗತಿಗಳನ್ನು ಆರಂಭಿಸಲಾಗಿದೆ. 30 ಜನ ವಿದ್ಯಾರ್ಥಿಗಳು ದಾಖಲಾಗಿದ್ದಾರೆ.

ಶಾಲೆಗಿದೆ 200 ವರ್ಷದ ಇತಿಹಾಸ :ಶಿಥಿಲಗೊಂಡಿರುವ ಶಾಲೆಯು 200 ವರ್ಷಗಳ ಇತಿಹಾಸ ಹೊಂದಿದೆ. ಅಂದು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ 30ಕ್ಕೂ ಹೆಚ್ಚು ಕೊಠಡಿಗಳನ್ನು ನಿರ್ಮಾಣ ಮಾಡಲಾಗಿತ್ತು. ಅದರಲ್ಲಿ 5 ಕಟ್ಟಡಗಳು ಸಂಪೂರ್ಣ ಹಾಳಾಗಿವೆ. ಅವುಗಳು ಬಳಕೆಗೆ ಯೋಗ್ಯವಿಲ್ಲ.

ಇನ್ನುಳಿದ ಶಿಥಿಲಗೊಂಡ‌‌ ಕಟ್ಟಡಗಳನ್ನು ದುರಸ್ತಿ ಮಾಡಿಸಿದರೆ ಇನ್ನೂ ಅನೇಕ ವರ್ಷಗಳ ಕಾಲ ಬಳಕೆಗೆ ಬರಲಿದೆ. ಆದರೆ, ಸ್ಥಳೀಯ ರಾಜಕೀಯ ನಾಯಕರ ಕಿತ್ತಾಟದಿಂದ ದುರಸ್ಥಿ ಆಗದೆ ಶಾಲೆ ಅವನತಿಯ ಅಂಚಿಗೆ ತಲುಪಿದೆ ಎಂಬ ದೂರು ಸಹ ಕೇಳಿ ಬಂದಿವೆ.

ವಿದ್ಯಾರ್ಥಿಗಳ ಪರದಾಟ :ಚಿಕ್ಕೋಡಿ‌ ಮತಕ್ಷೇತ್ರದ ಗಣೇಶ ಹುಕ್ಕೇರಿ ಪ್ರತಿನಿಧಿಸುವ ಶಾಸಕರ ಮಾದರಿ ಶಾಲೆಯಲ್ಲಿ 325 ವಿದ್ಯಾರ್ಥಿಗಳು ಕುಳಿತು ಪಾಠ ಕೇಳಲು ಕೊಠಡಿಗಳಿವೆ. ಆದರೆ, ಇಲ್ಲಿರುವ 8 ಕೊಠಡಿಗಳನ್ನ ಕೇಂದ್ರೀಯ ವಿದ್ಯಾಲಯಕ್ಕೆ ಹಾಗೂ 14 ಸರ್ಕಾರಿ ಪ್ರೌಢ ಶಾಲೆಗೆ ಕೊಡಲಾಗಿದೆ.

ಪರಿಣಾಮ ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕೊಠಡಿಗಳಿಲ್ಲದೆ ಸಮಸ್ಯೆ ಎದುರಿಸುತ್ತಿದ್ದಾರೆ. ಬಹುತೇಕ ಕೊಠಡಿಯ ಮೇಲ್ಛಾವಣಿಗಳು ಶಿಥಿಲಗೊಂಡು ಬೀಳುವ‌ ಸ್ಥಿತಿಯಲ್ಲಿವೆ. ಪ್ರಾಣ ಭಯದಲ್ಲಿ ಪಾಠ ಮಾಡುವ ಮತ್ತು ಕೇಳುವ ಪರಿಸ್ಥಿತಿ ಇಲ್ಲಿನ ಶಿಕ್ಷಕರು ಹಾಗೂ ಮಕ್ಕಳದ್ದಾಗಿದೆ.

ಆರು ವರ್ಷಗಳಿಂದ ಇದೇ ಪರಿಸ್ಥಿತಿ :ಸರ್ಕಾರದ ಗೈಡ್​​​​ಲೈನ್ಸ್ ಎಸ್ಒಪಿ ಪ್ರಕಾರ ಒಂದು ಕೊಠಡಿಯಲ್ಲಿ 20 ಮಕ್ಕಳು ಕುಳಿತುಕೊಳ್ಳಲು ಅನುಮತಿ ಇದೆ. ಆದರೆ, ಮಾದರಿ ಶಾಲೆಯಲ್ಲಿರುವ ಒಂದು ಕೊಠಡಿಯಲ್ಲಿ 46ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಕುಳಿತು ಪಾಠ ಕೇಳುತ್ತಿದ್ದಾರೆ.

ಒಂದೊಮ್ಮೆ ಯಾವುದಾದರೂ ವಿದ್ಯಾರ್ಥಿಗೆ ಕೋವಿಡ್​ ಬಂದರೆ ಎಲ್ಲರಿಗೂ ಹರಡುವ ಆತಂಕ ಕೂಡ ಇದೆ. ಹೀಗಾಗಿ, ಕೂಡಲೇ ಶಾಲೆಯ ದುರಸ್ಥಿ ಮಾಡಬೇಕೆಂಬುದು ಇಲ್ಲಿನ ಗ್ರಾಮಸ್ಥರ ಆಗ್ರಹವಾಗಿದೆ.

ಶಾಲಾ ಕಟ್ಟಡಗಳನ್ನು ಕಸಿದುಕೊಂಡು ಕೇಂದ್ರೀಯ ವಿದ್ಯಾಲಯ :ಕಳೆದ ಆರು ವರ್ಷಗಳ ಹಿಂದೆ ಚಿಕ್ಕೋಡಿಗೆ ಕೇಂದ್ರೀಯ ವಿದ್ಯಾಲಯದ ಕಟ್ಟಡ ನಿರ್ಮಾಣದ ಅಡಿಗಲ್ಲು ಕಾರ್ಯಕ್ರಮ ನಡೆದಿತ್ತು.

ಇದೀಗ ಕಟ್ಟಡ ನಿರ್ಮಾಣವಾಗಿ‌ ಎರಡು ವರ್ಷಗಳೇ ಕಳೆದರೂ ಕೇಂದ್ರೀಯ ವಿದ್ಯಾಲಯದ ಆಡಳಿತ ಮಂಡಳಿ ನೂತನ ಕಟ್ಟಡಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುತ್ತಿಲ್ಲ.

ಹಾಗಾಗಿ, ನೂತನವಾಗಿ ನಿರ್ಮಾಣವಾದ ಕೇಂದ್ರೀಯ ವಿದ್ಯಾಲಯದ ಕಟ್ಟಡಕ್ಕೆ ಆದಷ್ಟು ಬೇಗ ವಿದ್ಯಾರ್ಥಿಗಳನ್ನು ಸ್ಥಳಾಂತರ ಮಾಡುವ ಮೂಲಕ ಎಲ್ಲಾ ಸಮಸ್ಯೆಗಳನ್ನು ಪರಿಹರಬೇಕೆಂಬುದು ಪೋಷಕರ ಒತ್ತಾಯವಾಗಿದೆ.

ಇದನ್ನೂ ಓದಿ: ಡಿಸೆಂಬರ್ ಮೊದಲ ವಾರದವರೆಗೂ ಮಳೆ ಗಂಡಾಂತರ.. ಬೆಂಗಳೂರಿಗರೇ ಇನ್ನೂ 10 ದಿನ ಹುಷಾರ್ ​​​​​

ABOUT THE AUTHOR

...view details