ಬೆಳಗಾವಿ:ಮುಂಗಾರು ಮಳೆ ಇವತ್ತು ಕುಂದಾನಗರಿಯಲ್ಲಿ ಹರ್ಷ ಮೂಡಿಸಿದೆ. ಬೆಳಗ್ಗೆಯಿಂದಲೇ ಬಿಟ್ಟುಬಿಡದೇ ಸುರಿಯುತ್ತಿದ್ದ ವರುಣ ಸಂಜೆವರೆಗೂ ಮುಂದಿವರೆದಿದ್ದರಿಂದ ವೀಕೆಂಡ್ ಮೂಡ್‍ನಲ್ಲಿದ್ದ ಬೆಳಗಾವಿ ಜನತೆ ವರ್ಷಧಾರೆಗೆ ಕಂಡು ಬೆಚ್ಚನೆ ಮನೆಯಲ್ಲಿ ಕುಳಿತಿದ್ದಾರೆ.
ಛತ್ರಿ ಹಿಡಿದ ಚೆಲುವೆಯರ ಸೊಬಗು.. ಮುಂಗಾರು ಮಳೆಗೆ ಕುಂದಾನಗರಿ ಕನ್ಯೆಯರು ಕೂಲ್ ಕೂಲ್! - undefined
ಬೆಳಗಾವಿಯಲ್ಲಿ ಶನಿವಾರ ಆರ್ಭಟಿಸಿದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಕ್ರಿಯಾಶೀಲವಾಗಿವೆ. ಮಳೆಯನ್ನೇ ನಂಬಿ ಬಿತ್ತನೆ ಮಾಡಿದ ರೈತರು ಸಂತಸಗೊಂಡಿದ್ದಾರೆ.
ಮಳೆಯಲ್ಲಿಯೇ ಶಾಲಾ-ಕಾಲೇಜಿನತ್ತ ಹೆಜ್ಜೆ ಹಾಕುತ್ತಿರುವ ವಿದ್ಯಾರ್ಥಿಗಳು, ರೇನ್‍ಕೋಟ್ ಧರಿಸಿ, ಕೈಯಲ್ಲೊಂದು ಕೊಡೆ ಹಿಡಿದು ಕಚೇರಿಗೆ ಹೋಗುತ್ತಿರುವ ನೌಕರರು, ಮಳೆ ತಂದ ಹರ್ಷದ ಎಲ್ಲೆಡೆ ಕಾಣಿಸುತ್ತಿದೆ.
ಬಿಟ್ಟು ಬಿಡದೆ ಸುರಿದ ಮಳೆಯಿಂದಾಗಿ ಸುತ್ತಲಿನ ಹಳ್ಳಕೊಳ್ಳಗಳೆಲ್ಲವೂ ಮೈತುಂಬಿಕೊಂಡಿವೆ. ರಸ್ತೆ, ಚರಂಡಿಗಳೆಲ್ಲವೂ ಜಲಾವೃತಗೊಂಡು ಬೈಕ್, ವಾಹನ ಸವಾರರು ತುಸು ಪರದಾಡುವಂತಾಗಿದೆ. ಮುಂಗಾರನ್ನೇ ನಂಬಿ ಬಿತ್ತನೆ ಮಾಡಿದ್ದ ಅನ್ನದಾತರ ಮೊಗದಲ್ಲಿ ಮಂದಹಾಸ ಮೂಡಿದೆ. ಕೆಲ ರೈತರು ಈಗಾಗಲೇ ಬಿತ್ತನೆ ಮಾಡಿದ್ದರೆ, ಇನ್ನೂ ಕೆಲ ರೈತರು ಬಿತ್ತನೆಗೆ ಸಜ್ಜುಗೊಳ್ಳುತ್ತಿದ್ದಾರೆ. ಕಳೆದೊಂದು ವಾರದಿಂದ ಕುಂದಾನಗರಿಯಲ್ಲಿನ ಮೋಡ ಕವಿದ ವಾತವಾರಣದಿಂದ ಜನತೆ ಮಳೆಯ ಬರುವ ನಿರೀಕ್ಷೆಯಲ್ಲಿದ್ದರು.