ಬೆಳಗಾವಿ: ಜಾರಕಿಹೊಳಿ ಕುಟುಂಬದ ವಿರುದ್ಧ ಷಡ್ಯಂತ್ರ ಮೊದಲಿನಿಂದ ಮಾಡಿದ್ದಾರೆ. ಚುನಾವಣೆ 6 ತಿಂಗಳು ಇರುವಾಗ ಮತ್ತೆ ಜೋರಾಗಿ ನಡೆಯುತ್ತದೆ. ಸಿಡಿ ಷಡ್ಯಂತ್ರ ಜಗತ್ತು ಜಾಹೀರಾಗಿದೆ ಎಂದು ಎಂಎಲ್ಸಿ ಲಖನ್ ಜಾರಕಿಹೊಳಿ ಅವರು ಹೇಳಿದರು. ಅವರು ಗೋಕಾಕ್ ನಗರದಲ್ಲಿ ರಮೇಶ್ ಜಾರಕಿಹೊಳಿ ವಿರುದ್ಧ ಸಿಡಿ ಪ್ರಕರಣ ಕುರಿತು ಮಾಧ್ಯಮಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಬೆಳಗಾವಿ ಟು ಕನಕಪುರವರೆಗೆ ಸಿಡಿ ಕಾರ್ಖಾನೆ ಇದೆ. 2000 ಇಸವಿಯಿಂದ ಸಿಡಿ ಫ್ಯಾಕ್ಟರಿ ಕೆಲಸ ಮಾಡುತ್ತಿದೆ. ಸಿಬಿಐ ತನಿಖೆ ಆದರೆ ಎಲ್ಲವೂ ಬಹಿರಂಗ ಆಗಲಿದೆ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಹೆಬ್ಬಾಳ್ಕರ್ಗೆ ರಮೇಶ್ ಜಾರಕಿಹೊಳಿ ಬಳಸಿದ ಹೆಸರು ಕುರಿತು ರಿಯಾಕ್ಷನ್:ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬೇರೆ ಹೆಸರನ್ನು ಬಳಸಿದ್ದ ಸಹೋದರ ರಮೇಶ್ ಜಾರಕಿಹೊಳಿ ಹೇಳಿಕೆ ಕುರಿತು ಮಾತನಾಡಿ, ಅದೊಂದೇ ಅಲ್ಲ, ಇನ್ನೂ ಮೂರು ಹೆಸರುಗಳಿವೆ ಅಂತಾ ಜನರು ಮಾತನಾಡುತ್ತಾರೆ. ಹಾಗೆ ಯಾಕೆ ಜನ ಮಾತನಾಡುತ್ತಾರೆ ಯಾರಿಗೆ ಏನ್ ಗೊತ್ತು ಎಂದು ಲೇವಡಿ ಮಾಡಿದರು.
ಅವರು ಶಾಸಕರಾದ ಮೇಲೆ ಸಿದ್ದರಾಮಯ್ಯ ಮಾಜಿ ಸಿಎಂ ಆದರು. ಕುಮಾರಸ್ವಾಮಿ ಸರ್ಕಾರ ಅರ್ಧದಲ್ಲೇ ಹೋಯಿತು ಎಂದು ಶಾಸಕಿ ಹೆಬ್ಬಾಳ್ಕರ್ ಅವರ ಹೆಸರನ್ನು ಹೇಳದೇ ಲಖನ್ ಜಾರಕಿಹೊಳಿ ಕಿಚಾಯಿಸಿದರು.
ಇದನ್ನೂ ಓದಿ :'ಜೀವಂತ ಇದ್ದಾಗಲೇ ಬಿಜೆಪಿಗೆ ಸೇರಿಸೋಲ್ಲ': ಸತ್ರೂ ಬಿಜೆಪಿ ಸೇರಲ್ಲ ಎಂದ ಸಿದ್ದರಾಮಯ್ಯಗೆ ಈಶ್ವರಪ್ಪ ತಿರುಗೇಟು
ಡಿಕೆಶಿ, ಕೆಪಿಸಿಸಿ ಅಧ್ಯಕ್ಷರಾದ ಬಳಿಕ ನಾನು ಕಾಂಗ್ರೆಸ್ನಿಂದ ದೂರವಾದೆ:ನಾನು ಡಿ ಕೆ ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಆದಮೇಲೆ ಕಾಂಗ್ರೆಸ್ನಿಂದ ದೂರವಾದೆ. ಡಿ ಕೆ ಅಂದರೆ ಕರ್ನಾಟಕ ಪ್ರದೇಶ ಸಿಡಿ ಕಂಪನಿ ಅಧ್ಯಕ್ಷ ಎಂದು ವ್ಯಂಗ್ಯವಾಡಿದ ಜೊತೆಗೆ ಆಲ್ಟೋ 800 ನಿಂದ ಬಿಎಂಡ್ಲ್ಯೂವರೆಗೆ ಸಂಪರ್ಕ ಇದೆ. ಬೆಳಗಾವಿಯಲ್ಲಿನ ಸಿಡಿ ಫ್ಯಾಕ್ಟರಿ ಕನಕಪುರದವರೆಗೆ ಇದೆ. ಓಪನ್ ಆಗಿ ಏನೂ ಹೇಳಲ್ಲ ಎಂದರು.