ಚಿಕ್ಕೋಡಿ: ಅತಿವೃಷ್ಟಿಯಿಂದ ಹಾನಿಯಾದ ಜನರಿಗೆ ಪರಿಹಾರ ನೀಡಲು ಸರ್ವೆ ವರದಿಯನ್ನು ಶೀಘ್ರ ತಯಾರಿಸಬೇಕು ಎಂದು ಶಾಸಕ ಉಮೇಶ್ ಕತ್ತಿ ಅಧಿಕಾರಿಗಳಿಗೆ ಸೂಚಿಸಿದರು.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕು ಪಂಚಾಯತ್ ಸಭಾಭವನದಲ್ಲಿ ಅತಿವೃಷ್ಟಿ ಪರಿಹಾರ ಪರಿಶೀಲನಾ ಸಭೆಯಲ್ಲಿ ಕೃಷಿ, ತೋಟಗಾರಿಕೆ, ಗ್ರಾಮ ಲೆಕ್ಕಾಧಿಕಾರಿ ಮತ್ತು ಪಿಡಿಒಗಳಿಂದ ಮಾಹಿತಿ ಪಡೆದುಕೊಂಡು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಉಮೇಶ್ ಕತ್ತಿ ಅತಿವೃಷ್ಟಿಯಿಂದ ಬಳಲುತ್ತಿರುವ ಸಂತ್ರಸ್ತರಿಗೆ ಮಾನವೀಯ ದೃಷ್ಟಿಯಿಂದ ನೆರವಾಗಲು ಬೆಳೆ ಮತ್ತು ಮನೆ ಹಾನಿಯ ಸಮೀಕ್ಷೆ ಕೈಕೊಳ್ಳಲು ಈಗಾಗಲೇ ಎರಡು ಬಾರಿ ಸಭೆ ಜರುಗಿಸಿ ಸೂಚನೆ ನೀಡಲಾಗಿತ್ತು. ಆದರೆ, ಈವರೆಗೂ ಸರಿಯಾದ ಸಂತ್ರಸ್ತರ ಪಟ್ಟಿ ತಯಾರಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಇದು ನಾಚಿಗೇಡಿನ ಸಂಗತಿ ಎಂದ ಅವರು, ಇನ್ನೊಂದು ವಾರದೊಳಗೆ ನಿಖರವಾದ ವರದಿ ತಯಾರಿಸಬೇಕು ಎಂದು ತಹಶೀಲ್ದಾರ್ ರೇಷ್ಮಾ ತಾಳಿಕೋಟಿ ಮತ್ತು ವಿಶೇಷ ನೋಡಲ್ ಅಧಿಕಾರಿ ನಾಗನಗೌಡ ಪಾಟೀಲರಿಗೆ ಸೂಚನೆ ನೀಡಿದರು.