ಚಿಕ್ಕೋಡಿ:ರಾಜ್ಯದ ಮುಖ್ಯಮಂತ್ರಿಗಳು ಸಚಿವ ಸಂಪುಟ ವಿಸ್ತರಣೆ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳ ಮುಖೇನ ತಿಳಿದು ಬಂದಿದೆ. ನನಗೆ ಇಲ್ಲಿಯವರೆಗೂ ಯಾವುದೇ ಕರೆ ಬಂದಿಲ್ಲ. ನನಗೆ ಸಚಿವನಾಗಲು ಕರೆದರೆ ಹೋಗಿ ಸಚಿವನಾಗುತ್ತೇನೆ ಎಂದು ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಹೇಳಿದರು.
ಮಂತ್ರಿಗಿರಿಗಾಗಿ ಹಿಂದೆಯೂ ನಾನು ಲಾಬಿ ಮಾಡಿಲ್ಲ, ಮುಂದೆಯೂ ಮಾಡಲ್ಲ ಎಂದು ಸ್ಪಷ್ಟ ಪಡಿಸಿದರು. ಉಮೇಶ್ ಕತ್ತಿಯವರಿಗೆ ಮಂತ್ರಿಗಿರಿ ತಪ್ಪಿಸುವ ಹುನ್ನಾರದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಯಾರ ಸ್ಥಾನವನ್ನು ಯಾರಿಗೂ ತಪ್ಪಿಸಲು ಸಾಧ್ಯವಿಲ್ಲ, ನಸೀಬ್ ಯಾರ ಕೈಯಲ್ಲೂ ಇಲ್ಲ, ಮಂತ್ರಿಗಿರಿ ನೀಡಿದರೆ ಮಂತ್ರಿಯಾಗುವೆ ಇಲ್ಲವಾದರೆ ಕ್ಷೇತ್ರದಲ್ಲಿ ಕೆಲಸದಲ್ಲಿರುವೆ ಎಂದು ಹೇಳಿದರು.