ಕರ್ನಾಟಕ

karnataka

ETV Bharat / state

ಹೆಸ್ಕಾಂ ಅಧಿಕಾರಿ ತರಾಟೆಗೆ ತೆಗೆದುಕೊಂಡ ಶಾಸಕ ಶ್ರೀಮಂತ ಪಾಟೀಲ್... - ಅಸಮರ್ಪಕ ವಿದ್ಯುತ್ ಪೂರೈಕೆ

ಅಸಮರ್ಪಕ ವಿದ್ಯುತ್ ಪೂರೈಕೆಯಿಂದಾಗಿ ಕೋಪಗೊಂಡ ಕಾಗವಾಡ ಮತ ಕ್ಷೇತ್ರದ ಜನರು ಐನಾಪುರ ಗ್ರಾಮದ ವಿದ್ಯುತ್​ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

KN_ATH
ಹೆಸ್ಕಾಂ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡ ಶಾಸಕ

By

Published : Nov 25, 2022, 10:02 PM IST

ಅಥಣಿ/ಬೆಳಗಾವಿ: ಕಳೆದ ಎರಡು ತಿಂಗಳಿನಿಂದ ಕಾಗವಾಡ ಮತ ಕ್ಷೇತ್ರದಲ್ಲಿ ಅಸಮರ್ಪಕ ವಿದ್ಯುತ್ ವಿತರಣೆಯಿಂದ, ರೈತರು ಕಂಗಾಲಾಗಿದ್ದು, ಸರಿಯಾಗಿ ವಿದ್ಯುತ್ ಸರಬರಾಜು ಮಾಡುವಂತೆ ಹುಬ್ಬಳ್ಳಿ ವಿದ್ಯುತ್ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಭಾರತಿ ಡಿ ಅವರನ್ನು ಕಾಗವಾಡ ಶಾಸಕ ಶ್ರೀಮಂತ್ ಪಾಟೀಲ್ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಅಸಮರ್ಪಕ ವಿದ್ಯುತ್ ವಿತರಣೆಯಿಂದ ಕಾಗವಾಡ ಮತ ಕ್ಷೇತ್ರದ ಜನರು ಐನಾಪುರ ಗ್ರಾಮದ ವಿದ್ಯುತ್ ವಿತರಣಾ ಕೇಂದ್ರಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುತ್ತಿದ್ದಂತೆ, ಸ್ಥಳಕ್ಕೆ ಶಾಸಕ ಶ್ರೀಮಂತ ಪಾಟೀಲ್ ಭೇಟಿ ನೀಡಿ ಪ್ರತಿಭಟನಾಕಾರ ಅಹವಾಲು ಸ್ವೀಕರಿಸಿ ಸಮಸ್ಯೆ ಬಗ್ಗೆ ಸ್ಥಳೀಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ನಂತರ ದೂರವಾಣಿ ಮೂಲಕ ಹುಬ್ಬಳ್ಳಿ ವಿದ್ಯುತ್ ಇಲಾಖೆ ವ್ಯವಸ್ಥಾಪಕ ನಿರ್ದೇಶಕರಾದ ಭಾರತಿ ಡಿ ಅವರ ಜೊತೆ ಮಾತನಾಡಿ, ಈಗಾಗಲೇ ಕಾಗವಾಡ ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ನಿಮ್ಮ ಗಮನಕ್ಕೆ ತರಲಾಗಿದೆ, ಯಾಕೆ ನೀವು ಸಮರ್ಪಕವಾಗಿ ವಿದ್ಯುತ್ ನೀಡುತ್ತಿಲ್ಲ ಎಂದು ಪ್ರಶ್ನೆ ಮಾಡಿದರು, ಆದಷ್ಟು ಬೇಗನೆ ವಿದ್ಯುತ್ ಸಮಸ್ಯೆ ಸರಿ ಪಡಿಸಬೇಕೆಂದು ಶಾಸಕರು ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದಂತೆ ಅಧಿಕಾರಿಗಳು ತಬ್ಬಿಬ್ಬಾಗಿ ಆದಷ್ಟು ಬೇಗನೆ ಎಲ್ಲವೂ ಸರಿಪಡಿಸಲಾಗುವುದೆಂದು ಶಾಸಕರಿಗೆ ಹಾಗೂ ಪ್ರತಿಭಟನಾಕಾರರಿಗೆ ಸ್ಥಳೀಯ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಇದೇ ವೇಳೆ, ರೈತ ಮುಖಂಡ ರಮೇಶ್ ಮಡಿವಾಳ ಮಾತನಾಡಿ, ಕಳೆದ ಎರಡು ತಿಂಗಳಿನಿಂದ ಕಾಗವಾಡ ತಾಲೂಕಿನ ಕೆಂಪುವಾಡ ಗ್ರಾಮಕ್ಕೆ ಪ್ರತಿ ದಿನ ಒಂದು ಗಂಟೆ ಅಥವಾ ಎರಡು ಗಂಟೆ ವಿದ್ಯುತ್ ವಿತರಣೆ ಆಗುತ್ತಿದ್ದು, ಇದರಲ್ಲಿ ನಾಲ್ಕೈದು ಬಾರಿ ವಿದ್ಯುತ್​ ಕಣ್ಣಾ ಮುಚ್ಚಾಲೆ ಆಗೋದ್ರಿಂದ, ಬೆಳೆಗಳಿಗೆ ನೀರು ಹಾಯಿಸದೇ ಇರುವುದರಿಂದ ಮುಗಿಲೆತ್ತರಕ್ಕೆ ಬೆಳೆದ ಬೆಳೆಗಳು ಸದ್ಯ ಒಣಗುವ ಹಂತಕ್ಕೆ ಬಂದಿವೆ.

ಹಲವಾರು ಬಾರಿ ಈ ಬಗ್ಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗುತ್ತಿಲ್ಲ, ಸರಿಯಾಗಿ ವಿದ್ಯುತ್ ಸರಬರಾಜು ಆಗದೇ ಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ತೀವ್ರ ತೊಂದರೆಯಾಗುತ್ತಿದ್ದು, ಆದಷ್ಟು ಬೇಗನೆ ಸರಿಪಡಿಸುವಂತೆ ಆಗ್ರಹಿಸಿದರು.

ಇದನ್ನೂ ಓದಿ:ಓಲಾ ಉಬರ್ ಆಟೋಗಳಿಗೆ ದರ ನಿಗದಿ ಮಾಡಿ ಸಾರಿಗೆ ಇಲಾಖೆ ಆದೇಶ

ABOUT THE AUTHOR

...view details