ಗೋಕಾಕ್:ನಗರದ ಮಲ್ಲಿಕಾರ್ಜುನ/ಮಲ್ಲಿಕಸಾಬ ಗುಡ್ಡದಲ್ಲಿ ನಡೆಯುತ್ತಿದ್ದ ಬಂಡೆ ತೆರವು ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿದ್ರು.
ಬಂಡೆ ತೆರವು ಸ್ಥಳಕ್ಕೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ.. - ಮಲ್ಲಿಕಸಾಬ ಗುಡ್ಡ
ಗೋಕಾಕ್ ನಗರದ ಮಲ್ಲಿಕಾರ್ಜುನ ಗುಡ್ಡದಲ್ಲಿ ನಡೆಯುತ್ತಿದ್ದ ಬಂಡೆ ತೆರವು ಕಾರ್ಯಾಚರಣೆ ಸ್ಥಳಕ್ಕೆ ಶಾಸಕ ಸತೀಶ ಜಾರಕಿಹೊಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ಶಾಸಕ ಸತೀಶ ಜಾರಕಿಹೊಳಿ ಗೋಕಾಕ್ ಬಂಡೆ ರಾಜ್ಯದಲ್ಲಿ ಸದ್ದು ಮಾಡಿದೆ. ಒಂದು ಬಂಡೆ ತೆರವುಗೊಳಿಸಲಾಗಿದೆ. ಇನ್ನೊಂದು ಬಂಡೆ ತೆರವುಗೊಳಿಸಿದ್ರೆ, ಭಯ ದೂರವಾಗಲಿದೆ. ಇನ್ನೊಂದು ಬಂಡೆ ಬಗ್ಗೆ ಅಧಿಕಾರಗಳು ನಿರ್ಣಯ ಮಾಡ್ತಾರೆ ಎಂದರು.ಪ್ರವಾಹ ಮತ್ತು ತುರ್ತು ಸಂದರ್ಭದಲ್ಲಿ ನಮ್ಮ ನೆರವು ಖಚಿತ. ಸಾಮಾಜಿಕ ಕೆಲಸ ಮಾಡಲು ನಾನು ಸಿದ್ಧ. ಅವಕಾಶ ಸಿಕ್ಕಲ್ಲಿ ಕೆಲಸ ಮಾಡಿದ್ದೇವೆ. ಪಬ್ಲಿಕ್ ಕೆಲಸ ಇದು, ಯಾರು ಬೇಕಾದ್ರೂ ಮಾಡಬಹುದು ಎಂದರು.
ಗೋಕಾಕ್ ಉಪಚುನಾವಣೆ ವಿಚಾರ:ನಾನೇನು ಬಂಡೆಗಲ್ಲಿಗೆ ಸರಿ ಅಂತಾ ಹೇಳಿಲ್ಲ. ನನ್ನ ಸ್ವಂತ ಖರ್ಚಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಫೋಟೋ, ಬ್ಯಾನರ್ ಹಾಕೋದ್ರಲ್ಲಿ ತಪ್ಪಿಲ್ಲ. ನಾನೇನು ನಗರಸಭೆ ಹೆಸರಲ್ಲಿ ಮೋಸ ಮಾಡಿಲ್ಲ. ಸ್ವಂತ ಹಣದಲ್ಲಿ ಕೆಲಸ ಮಾಡುತ್ತೇವೆ. ಚುನಾವಣೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದು, ಮತದಾರರನ್ನು ಸೆಳೆಯಲು ಎಲ್ಲಾ ರೀತಿಯ ಪ್ರಯತ್ನ ನಡೆಸುತ್ತಿದ್ದೇನೆ. ನಗರಸಭೆ ಅವ್ಯಹಾರದ ಬಗ್ಗೆ ಇನ್ನೊಂದು ಹಾಡು ರಿಲೀಸ್ ಶೀಘ್ರದಲ್ಲೇ ಆಗಲಿದೆ. ರಮೇಶ ಜಾರಕಿಹೊಳಿ ತಿಳಿದುಕೊಂಡು ಜನರ ಕೆಲಸ ಮಾಡಬೇಕು. ನಾವು ಅವರಿಗೆ ಹೇಳೋಕೆ ಆಗಲ್ಲ ಎಂದರು.