ಬೆಳಗಾವಿ:ನನಗೆ ವರ್ಷದ 365 ದಿನವೂ ಸಿಹಿ ಸುದ್ದಿನೇ, ಕಹಿ ಎನ್ನವುದು ಗೊತ್ತೇ ಇಲ್ಲ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಬೆಳಗಾವಿ ನಗರದ ಖಾಸಗಿ ಹೋಟೆಲ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸಚಿವ ಸಂಪುಟದ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.
ಬಡ್ತಿ ಹೊಂದುವಂತಹ ನೀರೀಕ್ಷೆಗಳು ಇದೆಯ ಎಂದು ಪ್ರಶ್ನಿಸಿದಾಗ, ನಾನು ಐದು ವರ್ಷನೂ ಸಿಹಿ ಅನುಭವಿಸಿದ್ದೇನೆ. ನನಗೆ ಈಗಾಗಲೇ 2009 ರಿಂದ 2012 ರವರೆಗೆ ಸಚಿವನಾಗಿ ಕೆಲಸ ಮಾಡಿದ ಅನುಭವವಿದೆ. ಹಾಗೆ ಮುಂದಿನ ಸಚಿವ ಸಂಪುಟಕ್ಕೆ ಸಚಿವರಾಗಲು ಅವಕಾಶವಿದೆಯಲ್ಲ ಎಂದಾಗ ಈ ಕುರಿತು ನನಗೆ ದುಃಖವು ಇಲ್ಲ ನೋವು ಇಲ್ಲ ಸಂತೋಷದಲ್ಲಿ ಇದ್ದೇನೆ. ನಾನು ಯಾವತ್ತು ಸಂತೋಷ ಜೀವಿ ಎಂದರು.
ಮುಂದೆ, ಇದೇ ವಿಷಯವಾಗಿ ಸಾವಿರಾರು, ಲಕ್ಷ ಕೋಟ್ಯಧಿಪತಿಗಳು ಇದ್ದಾರೆ ಅವರು ಶಾಸಕರಾಗಿಲ್ಲ. ಆದರೆ, ನನ್ನಂತಹ ಒಬ್ಬ ಸಾಮಾನ್ಯ ಮನುಷ್ಯನನ್ನು ಹೊನ್ನಾಳಿ ಜನರು ಆಯ್ಕೆ ಮಾಡಿದ್ದಾರೆ. ಅದುವೇ ನನಗೆ ಹೆಮ್ಮೆಯ ವಿಷಯ ಅದಕ್ಕಿಂತ ದೊಡ್ಡ ಸ್ಥಾನ ಯಾವುದೂ ಇಲ್ಲ. ಜನರು, ದೇಶ ಬಹಳ ಮುಖ್ಯ. ಜನಾದೇಶ ಮತ್ತೊಮ್ಮೆ ನನಗೆ ಸಿಗುತ್ತೆ ಅಂತಹ ಆತ್ಮ ವಿಶ್ವಾಸವಿದೆ ಎಂದು ಹೇಳಿದರು.
ನನಗೆ ಸರ್ಕಾರ ಗೌರವ ಕೊಟ್ಟಿದೆ: ಹೊನ್ನಾಳಿ ಕ್ಷೇತ್ರದ ಜನ ನನ್ನನು ಆಯ್ಕೆ ಮಾಡಿದ ಮೇಲೆ ಮಾಧ್ಯಮಗಳು ರಾಜ್ಯಕ್ಕೆ ಪರಿಚಯಿಸಿದ್ದಾರೆ. ನಾನು ಅಭಿವೃದ್ಧಿನೂ ಕಾರ್ಯ ಮಾಡಿದ್ದೀನಿ, ನನ್ನಲ್ಲಿ ಸೇವಾಮನೋಭಾವವು ಇದೆ. ಸ್ಥಾನ ಸಿಗದಿದ್ದಲ್ಲಿ ಅವಕಾಶದಿಂದ ವಂಚಿತಾನಾಗಿದ್ದೇವೆ ಎಂದು ಸುಮ್ಮಾನಾಗುತ್ತೇನೆ. ಹಾಗೆ ನನಗೆ ಸರ್ಕಾರ ಮತ್ತು ಸಂಘಟನೆ ಎಲ್ಲ ರೀತಿಯ ಸ್ಥಾನಮಾನ ಗೌರವ ಕೊಟ್ಟಿದೆ.
ನನಗೆ ಎಲ್ಲ ಸಾಮರ್ಥ್ಯ ಇದೆ, ಅರ್ಹತೆ ಅನುಭವವು ಇದೆ. ಆದರೆ ರೇಣುಕಾಚಾರ್ಯ ಬೇಡ ಅಂತಾ ಇರಬಹುದು ಏನೋ. ಇನ್ನೂ ಹೊನ್ನಾಳಿ ಕ್ಷೇತ್ರದಲ್ಲಿ ಟಿಕೆಟ್ ನೀಡಿದ್ದು ನನ್ನ ಸಾಮರ್ಥ್ಯ ನೋಡಿಯೇ ಕೊಟ್ಟಿದ್ದು, ಹೋರಾಟದ ಫಲದಿಂದ ನಾನು ಶಾಸಕನಾಗಿದ್ದೇನೆ ಎಂದು ರೇಣುಕಾಚಾರ್ಯ ಪರೋಕ್ಷವಾಗಿ ಬೇಸರ ವ್ಯಕ್ತಪಡಿಸಿದರು.
ಮುಗಿಯದ ಸಂಪುಟ ಕಸರತ್ತು: ಈಗಾಗಲೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೈಕಮಾಂಡ್ ಜೊತೆ ವಿಸ್ತೃತ ಚರ್ಚೆ ನಡೆಸಿದ್ದಾರೆ. ಸಂಪುಟ ವಿಸ್ತರಣೆ ಸಂಬಂಧ ಅಂತಿಮ ಹಂತಕ್ಕೆ ಬಂದಿದೆ ಎಂದು ಬಸವರಾಜ್ ಹೇಳಿದ್ದಾರೆ. ಇದೇ ವಿಚಾರದ ಕುರಿತು ಮುಖ್ಯಮಂತ್ರಿ ಹಲವು ಬಾರಿ ದೆಹಲಿಗೆ ಚರ್ಚಾ ಸಲುವಾಗಿ ಹೋಗಿದ್ದಾರೆ.
ಇನ್ನು ಸಚಿವ ಸಂಪುಟ ಸ್ಥಾನದ ಕುರಿತು ಹಲವು ಶಾಸಕರಿಗೆ ಅಸಮಧಾನವಿದೆ. ಈಶ್ವರಪ್ಪ ಅವರು ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಆತ್ಮಹತ್ಯೆ ತನಿಖೆ ನಂತರ ಈ ಸಾವಿಗೂ ಈಶ್ವರಪ್ಪ ಅವರಿಗೂ ಸಂಬಂಧವಿಲ್ಲ ಎಂದು ತಿಳಿದು ಬಂದ ಮೇಲೆ ಪುನಃ ಸಚಿವ ಸ್ಥಾನಕ್ಕೆ ತೆಗೆದುಕೊಳ್ಳುತ್ತಾರೆ ಎಂಬ ಭರವಸೆವಿತ್ತು. ಆದರೆ, ಆರೋಪದಿಂದ ಮುಕ್ತರಾದ ಮೇಲು ಸಚಿವ ಸಂಪುಟ ಸ್ಥಾನಕ್ಕೆ ಸೇರಿಸಿಕೊಳ್ಳದೇ ಇರುವುದು ಅವರಲ್ಲಿ ಅಸಮಾಧಾನ ತಂದಿತ್ತು.
ಇದೇ ಕಾರಣಕ್ಕೆ ಮುಖ್ಯಮಂತ್ರಿ ಅವರು ಇನ್ನು ಈಶ್ವರಪ್ಪ ಮತ್ತು ಮಾಜಿ ಸಚಿವ ರಮೇಶ್ ಜಾರಕಿಹೊಳೆ ಪಕ್ಷದಿಂದ ಬಂಡಾಯ ಏಳಬಾರದೆಂದು ಇವರಿಬ್ಬರೊಡನೆ ಮಾತು ಕತೆ ನಡೆಸಿ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಇದನ್ನು ಮಾಜಿ ಸಚಿವರು ಮಾಧ್ಯಮದೊಂದಿಗೆ ಹಂಚಿಕೊಂಡಿದ್ದರು ಕೂಡ. ಅದೇನೆ ಇರಲಿ ಚುನಾವಣೆ ಸನಿಹದಲ್ಲಿ ಮುಖ್ಯಮಂತ್ರಿ ಕಸರತ್ತು ಜೋರಾಗಿಯೆ ನಡೆಯುತ್ತಿದ್ದು, ಆಕಾಂಕ್ಷಿಗಳು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ:ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಮರಾಠ ಅಭ್ಯರ್ಥಿ ಕಣಕ್ಕಿಳಿಸಲು ರಣತಂತ್ರ