ಕರ್ನಾಟಕ

karnataka

ETV Bharat / state

ಸಿಡಿ ಪ್ರಕರಣದ ತನಿಖೆ ಎಸ್ಐಟಿಗೆ ವಹಿಸಿರುವುದು ಸ್ವಾಗತಾರ್ಹ: ಶಾಸಕ ಮಹೇಶ್ ಕುಮಟಳ್ಳಿ - ಸಿಡಿ ಪ್ರಕರಣದ ಎಸ್​ಐಟಿ ತನಿಖೆ

ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ತನಿಖೆಯನ್ನು ಎಸ್​ಐಟಿಗೆ ವಹಿಸಿದನ್ನು ಶಾಸಕ ಮಹೇಶ್ ಕುಮಟಳ್ಳಿ ಸ್ವಾಗತಿಸಿದ್ದಾರೆ.

MLA Mahesh Kumatalli reaction about SIT investigation of CD case
ಶಾಸಕ ಮಹೇಶ್ ಕುಮಟಳ್ಳಿ

By

Published : Mar 12, 2021, 5:54 PM IST

ಅಥಣಿ: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದೆನ್ನಲಾದ ಅಶ್ಲೀಲ ಸಿಡಿ ಪ್ರಕರಣ ತನಿಖೆಯನ್ನು ಎಸ್ಐಟಿ ನೀಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸತ್ಯಾಸತ್ಯತೆ ಹೊರ ಬರಲಿದೆ ಎಂದು ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಹೇಳಿದರು.

ತಾಲೂಕಿನ ಅವರಖೋಡ ಗ್ರಾಮದಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಮಾಜಿ ಸಚಿವರ ಸಿಡಿ ಪ್ರಕರಣ ಮುಗಿದು ಹೋಗಿರುವ ಅಧ್ಯಾಯ. ಅದೇ ವಿಚಾರವನ್ನು ಪದೇ ಪದೆ ಮಾತನಾಡುವುದು ಸರಿಯಲ್ಲ. ಸದ್ಯ ಪ್ರಕರಣ ತನಿಖೆ ಹಂತದಲ್ಲಿದೆ, ಎಸ್ಐಟಿಗೆ ತನಿಖೆಯ ಜವಾಬ್ದಾರಿ ನೀಡಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ಸತ್ಯಾಸತ್ಯತೆ ಆದಷ್ಟು ಬೇಗ ಹೊರ ಬರಲಿದೆ ಎಂದರು.

ಶಾಸಕ ಮಹೇಶ್ ಕುಮಟಳ್ಳಿ

ಇದನ್ನೂ ಓದಿ: ಸಿಡಿ ಪ್ರಕರಣದ SIT ತನಿಖೆ ಚುರುಕು: ರಾಮನಗರದ ಯುವತಿ ಸೇರಿ ಐವರನ್ನು ವಶಕ್ಕೆ ಪಡೆದು ವಿಚಾರಣೆ

ನಾವು ರಮೇಶ್ ಜಾರಕಿಹೊಳಿ ಜೊತೆಗಿದ್ದೇವೆ. ಕೆಲವರು ಪ್ರಕರಣವನ್ನು ಸಿಬಿಐಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ಯಾವುದೇ ತನಿಖಾ ಸಂಸ್ಥೆಗಳಾದರೂ ಅದಕ್ಕೆ ತಮ್ಮದೇ ಆದ ರೂಪುರೇಷೆಗಳಿರುತ್ತವೆ. ಆದಷ್ಟು ಬೇಗ ಎಸ್​ಐಟಿ ತನಿಖಾ ವರದಿ ಹೊರಬರಲಿದೆ ಎಂದು ಹೇಳಿದರು.

ABOUT THE AUTHOR

...view details