ಕರ್ನಾಟಕ

karnataka

ETV Bharat / state

ಸವದಿ ವಿರುದ್ಧ ಕುಮಟಳ್ಳಿ ಗೆದ್ದಿರೋದಕ್ಕೆ ದೇವಸ್ಥಾನ ನಿರ್ಮಿಸಿ ಹರಕೆ ತೀರಿಸಿದ ಅಥಣಿ ರೈತ..

ಮಹಾವೀರ ಪಡನಾಡರು ಸುಮಾರು ₹15 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಯಲ್ಲಮ್ಮ ದೇವಿಯ ದೇವಸ್ಥಾನ ನಿರ್ಮಿಸುವ ಮೂಲಕ ನನ್ನ ಹಸ್ತದಿಂದಲೇ ಉದ್ಘಾಟನೆಗೊಳಿಸಿದ್ದಾರೆ ಎಂದ ಶಾಸಕರು ಸಂತಸ ವ್ಯಕ್ತಪಡಿಸಿದರು..

athani
ಅಥಣಿ

By

Published : Nov 28, 2020, 4:39 PM IST

ಅಥಣಿ :2018ರ ವಿಧಾನಸಭೆ ಚುನಾವಣೆಯಲ್ಲಿ ಲಕ್ಷ್ಮಣ್ ಸವದಿ ವಿರುದ್ಧ ಮಹೇಶ್ ಕುಮಟಳ್ಳಿ ಗೆಲುವು ಸಾಧಿಸಿದ್ರೆ ದೇವಸ್ಥಾನ ನಿರ್ಮಾಣ ಮಾಡುತ್ತೇನೆಂದು ಕುಮಟ್ಟಳ್ಳಿ ಅಭಿಮಾನಿಯೊಬ್ಬರು ಹರಕೆ ಕಟ್ಟಿಕೊಂಡಿದ್ದರು. ಇದೀಗ ದೇವಸ್ಥಾನ ಪೂರ್ಣ ನಿರ್ಮಾಣವಾಗಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಉದ್ಘಾಟನೆ ಮಾಡಿದರು.

ನೂತನ ಯಲ್ಲಮ್ಮ ದೇವಸ್ಥಾನ ದೇವಾಲಯ ಉದ್ಘಾಟಿಸಿದ ಶಾಸಕ ಮಹೇಶ್‌ ಕುಮಟಳ್ಳಿ

ಅಥಣಿ ತಾಲೂಕಿನ ಸಂಕೋನಟ್ಟಿ ಗ್ರಾಮದ ಮಹಾವೀರ ಪಡನಾಡ ಎಂಬ ರೈತ ಹಾಗೂ ಹಾಲಿ ಶಾಸಕ ಮಹೇಶ್ ಕುಮಟಳ್ಳಿ 2018ರ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ್ ಸವದಿ ಅವರ ವಿರುದ್ಧ ಗೆಲುವು ಸಾಧಿಸಿದ್ರೆ ಯಲ್ಲಮ್ಮ ದೇವಾಲಯ ನಿರ್ಮಾಣ ಮಾಡೋದಾಗಿ ಗ್ರಾಮಸ್ಥರಿಗೆ ಭರವಸೆ ನೀಡಿದ್ದರು. ಸದ್ಯ ಮಹೇಶ್ ಕುಮಟಳ್ಳಿ ಅವರು ನೂತನ ದೇವಾಲಯವನ್ನು ಉದ್ಘಾಟಿಸಿದರು.

ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ದೇವಾಲಯವನ್ನು ಉದ್ಘಾಟಿಸಲಾಯಿತು..

ಇದೇ ಸಂದರ್ಭದಲ್ಲಿ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿ, ನಾನು 2018ರಲ್ಲಿ ಅಥಣಿ ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಿದ ಸಮಯದಲ್ಲಿ ಪ್ರಚಾರಕ್ಕೆ ಸಂಕೋನಟ್ಟಿ ಗ್ರಾಮಕ್ಕೆ ನಮ್ಮ ಕುಟುಂಬದವರು ಬಂದಾಗ ಗ್ರಾಮಸ್ಥರು ನಿಮಗೆ ಮತ ಚಲಾವಣೆ ಮಾಡುತ್ತೇವೆ, ನಮ್ಮ ಗ್ರಾಮಕ್ಕೆ ಯಲ್ಲಮ್ಮ ದೇವಾಲಯ ನಿರ್ಮಾಣ ಮಾಡಿ ಕೊಡಿ ಎಂದು ಮನವಿ ಸಲ್ಲಿಸಿದರು.

ಆ ಸಂದರ್ಭದಲ್ಲಿ ಮಹಾವೀರ ಪಡನಾಡ ಅವರು ನಾನು ನನ್ನ ಸ್ವಂತ ಹಣದಲ್ಲಿ ಗ್ರಾಮದಲ್ಲಿ ಶಕ್ತಿ ದೇವತೆ ಯಲ್ಲಮ್ಮನ ದೇವಸ್ಥಾನ ನಿರ್ಮಾಣ ಮಾಡುತ್ತೇನೆ. ನೀವು ಮಹೇಶ್ ಕುಮಟಳ್ಳಿ ಅವರಿಗೆ ಮತ ನೀಡಿ ಎಂದು ಗ್ರಾಮಸ್ಥರಿಗೆ ಆಶ್ವಾಸನೆ ನೀಡಿದ್ದರು. ಅದೇ ಪ್ರಕಾರ ಇವತ್ತು ದೇವಾಲಯ ಸಂಪೂರ್ಣ ನಿರ್ಮಾಣವಾಗಿ ಆಶ್ವಾಸನೆ ಪೂರ್ಣವಾಗಿದೆ. ಹಾಗೆಯೇ ಜತೆಗೆ ದೇವಿಯ ಮುಂದೆ ಪ್ರತಿಜ್ಞೆ ಮಾಡಿದ್ದರು.

ಆ ಪ್ರಕಾರ ಮಹಾವೀರ ಪಡನಾಡರು ಸುಮಾರು ₹15 ಲಕ್ಷಕ್ಕೂ ಅಧಿಕ ಮೊತ್ತದಲ್ಲಿ ಯಲ್ಲಮ್ಮ ದೇವಿಯ ದೇವಸ್ಥಾನ ನಿರ್ಮಿಸುವ ಮೂಲಕ ನನ್ನ ಹಸ್ತದಿಂದಲೇ ಉದ್ಘಾಟನೆಗೊಳಿಸಿದ್ದಾರೆ ಎಂದ ಶಾಸಕರು ಸಂತಸ ವ್ಯಕ್ತಪಡಿಸಿದರು.

ಈ ವೇಳೆ ನೂರಾರು ಮಹಿಳೆಯರಿಗೆ ಬಂಗಾರದ ಮೂಗುತಿ, ಕಿವಿಯೋಲೆ, ಬೆಳ್ಳಿಯ ಕಾಲುಂಗುರ, ರೇಷ್ಮೆ ಸೀರೆ, ರವಿಕೆ ನೀಡುವ ಮೂಲಕ ಸನ್ಮಾನಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನ ನಿರ್ಮಿಸಿದ್ದಕ್ಕಾಗಿ ಗ್ರಾಮಸ್ಥರ ಪರವಾಗಿ ಮಹಾವೀರ ಪಡನಾಡ ಹಾಗೂ ಅವರ ಪತ್ನಿ ಕಲ್ಪನಾ ಪಡನಾಡ ಅವರನ್ನು ಶಾಸಕರು ಹಾಗೂ ನಾಗರಿಕರು ಸನ್ಮಾನಿಸಿದರು. ದೇವಸ್ಥಾನದ ಉದ್ಘಾಟನೆ ಹಾಗೂ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭದಲ್ಲಿ ಮಹಾವೀರ ಪಡನಾಡ ಹಾಗೂ ಅವರ ಪತ್ನಿ ಕಲ್ಪನಾ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ABOUT THE AUTHOR

...view details