ಕರ್ನಾಟಕ

karnataka

ETV Bharat / state

ಅಯೋಧ್ಯೆ ರಾಮ ಮಂದಿರಕ್ಕೆ ಅಥಣಿ ಶಾಸಕರಿಂದ ಐದು ಲಕ್ಷ ರೂಪಾಯಿ ದೇಣಿಗೆ - ಅಥಣಿ ಶಾಸಕ ಮಹೇಶ್ ಕುಮಟಳ್ಳಿ

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ ದೇವಸ್ಥಾನಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

donate
ದೇಣಿಗೆ

By

Published : Feb 24, 2021, 4:57 PM IST

ಅಥಣಿ: ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಇಂದು ಅಥಣಿ ಪಟ್ಟಣದಲ್ಲಿ ಶಾಸಕರ ಸಹೋದರ ಡಾ. ಪ್ರಕಾಶ ಕುಮಟಳ್ಳಿ ಅವರ ಸಮ್ಮುಖದಲ್ಲಿ ಆರ್​ಎಸ್​ಎಸ್​ ಹಿರಿಯ ಮುಖಂಡ ಅರವಿಂದ ದೇಶಪಾಂಡೆ ಅವರ ಮುಖಾಂತರ ವ್ಯವಸ್ಥಾಪಕ ನಿರ್ದೇಶಕರು, ರಾಮಜನ್ಮಭೂಮಿ ತೀರ್ಥಕ್ಷೇತ್ರ, ರಾಮಕಚಾರಿ ಆಶ್ರಮ, ರಾಮಕೊಟ, ಅಯೋಧ್ಯೆ-224123, ಉತ್ತರ ಪ್ರದೇಶ ಇವರಿಗೆ ದೇಣಿಗೆ ಹಣ ಕಳುಹಿಸಿದ್ದಾರೆ.

ಇದೆ ವೇಳೆ ಅಥಣಿ ಶಾಸಕ ಮಹೇಶ್ ಕುಮಟಳ್ಳಿ ಮಾತನಾಡಿ, ರಾಮಚಂದ್ರನೆಂದರೆ ಭಾರತದ ಆತ್ಮ ಇದ್ದ ಹಾಗೆ. ಭಾರತದ ಆದರ್ಶವೆನಿಸಿದ ಮರ್ಯಾದಾ ಪುರುಷೋತ್ತಮನಾದ ಶ್ರೀ ರಾಮಚಂದ್ರ ಈ ರಾಷ್ಟ್ರದ ಮಣ್ಣಿನ ಕಣಕಣದಲ್ಲಿ ವ್ಯಾಪಿಸಿದ್ದಾನೆ. ಆಯೋಧ್ಯೆಯಲ್ಲಿ ಕಟ್ಟುವ ಶ್ರೀ ರಾಮನ ದೇವಾಲಯ, ಭಾರತೀಯ ಆದರ್ಶಗಳನ್ನು ಎತ್ತಿಹಿಡಿಯುವ ಸಾಂಸ್ಕೃತಿಕ ಕೇಂದ್ರವೆಂದು ನನ್ನ ಭಾವನೆಯಾಗಿದೆ. ಶ್ರೀ ರಾಮಚಂದ್ರನ ಶಕ್ತಿ ಸ್ಫೂರ್ತಿ, ಆದರ್ಶಗಳು ಭಾರತೀಯರಿಗೆ ಉತ್ತೇಜನ ನೀಡುವ ಮೂಲಕ ಈ ರಾಷ್ಟ್ರದಲ್ಲಿ ರಾಜಚೈತನ್ಯ ಹಬ್ಬಲಿ ಎಂದು ನಾನು ಆಶಿಸುತ್ತೇನೆ ಎಂದರು.

ಲಂಕೆಗೆ ಸೇತುವೆ ಕಟ್ಟುವಾಗ ಅಳಿಲು ತನ್ನ ಮೈಗೆ ಹತ್ತುವ ಮರಳು ಹಿಡಿಯಷ್ಟು ತಂದು ಹಾಕಿ, ತನ್ನ ಅಲ್ಪ ಸೇವೆ ಸಲ್ಲಿಸಿದಂತೆ ನಾನು ಈ ಮಹಾನ್ ಕಾರ್ಯಕ್ಕೆ 5 ಲಕ್ಷ ರೂಗಳ ದೇಣಿಗೆ ನೀಡಿ ಕೃತಾರ್ಥನಾಗಿದ್ದೇನೆ. ಈ ಮಹಾನ್ ಸಾಗರದಲ್ಲಿ ಬಿಂದುವಾಗಿ ಸೇರಿ ಸೇವೆ ಮಾಡಲು ಸಿಕ್ಕ ಅವಕಾಶ ನನ್ನ ಬದುಕಿನ ಸುಕೃತ ಪುಣ್ಯವೆಂದು ಅರಿತಿದ್ದೇನೆ ಎಂದು ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.

ABOUT THE AUTHOR

...view details