ಅಥಣಿ: ತಾಲೂಕಿನ ಕೊರೊನಾ ವಾರಿಯರ್ಸ್ಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಹೋಮಿಯೋಪತಿ ಮಾತ್ರೆ ಅರ್ಸೇನಿಕ್ ಅಲ್ಬಮ್ 30ನ್ನು ಶಾಸಕ ಮಹೇಶ್ ಕುಮಟಳ್ಳಿ ಅಥಣಿ ಪೊಲೀಸ್ ಠಾಣೆಯಲ್ಲಿ ವಿತರಿಸಿದರು.
ಅಥಣಿ: ಕೊರೊನಾ ವಾರಿಯರ್ಸ್ಗೆ ರೋಗ ನಿರೋಧಕ ಮಾತ್ರೆ ವಿತರಿಸಿದ ಶಾಸಕ ಕುಮಟಳ್ಳಿ - ರೋಗ ನಿರೋಧಕ ಮಾತ್ರೆ ವಿತರಿಸಿದ ಶಾಸಕ ಮಹೇಶ್ ಕುಮಟಳ್ಳಿ
ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆರ್ಸೇನಿಕ್ ಅಲ್ಬಮ್ 30 ಹೋಮಿಯೋಪತಿ ಮಾತ್ರೆಯನ್ನು ಅಥಣಿ ಪೊಲೀಸ್ ಠಾಣೆಯಲ್ಲಿ ತಾಲೂಕಿನ ಕೊರೊನಾ ವಾರಿಯರ್ಸ್ಗೆ ಶಾಸಕ ಮಹೇಶ್ ಕುಮಟಳ್ಳಿ ವಿತರಿಸಿದರು.
![ಅಥಣಿ: ಕೊರೊನಾ ವಾರಿಯರ್ಸ್ಗೆ ರೋಗ ನಿರೋಧಕ ಮಾತ್ರೆ ವಿತರಿಸಿದ ಶಾಸಕ ಕುಮಟಳ್ಳಿ immune pills Distributed to the Corona Warriors in Atani](https://etvbharatimages.akamaized.net/etvbharat/prod-images/768-512-7255034-988-7255034-1589853533400.jpg)
ಬಳಿಕ ಮಾತನಾಡಿದ ಅವರು, ಭಾರತದಲ್ಲಿ ಪುರಾತನ ಕಾಲದಿಂದಲೂ ಆಯುರ್ವೇದ ವೈದ್ಯ ಪದ್ಧತಿಯನ್ನು ಅನುಸರಿಸುತ್ತಾ ಬರಲಾಗಿದೆ. ಆಯುರ್ವೇದದಲ್ಲಿ ಜಗತ್ತಿಗೆ ವಿಶ್ವಗುರು ಭಾರತ. ಇತ್ತೀಚಿನ ದಿನಗಳಲ್ಲಿ ಹೋಮಿಯೋಪತಿ ಔಷಧ ಬಳಕೆಯ ಮಹತ್ವ ಕೂಡ ಜನರಿಗೆ ಅರಿವಾಗುತ್ತಿದೆ. ನಾನೂ ಕೂಡ ಕೆಲ ವರ್ಷಗಳಿಂದ ಹೋಮಿಯೋಪತಿ ಔಷಧ ಸೇವನೆಯನ್ನು ಮಾಡುತ್ತಿದ್ದೇನೆ ಎಂದರು.
ಹೋಮಿಯೋಪತಿ ವೈದ್ಯ ರವಿ ಸಂಕ ಮಾತನಾಡಿ, ಆಯುಷ್ ಇಲಾಖೆಯ ಹೋಮಿಯೋಪತಿಯ ಅರ್ಸೇನಿಕ್ ಅಲ್ಬಮ್ 30 ಮಾತ್ರೆಗಳನ್ನು ಮೂರು ದಿನಗಳವರೆಗೆ ಪ್ರತಿನಿತ್ಯ ಐದು ತೆಗೆದುಕೊಳ್ಳುಬೇಕು. ಇದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಆಯುಷ್ ಇಲಾಖೆಯಿಂದ ಮುಂದಿನ ದಿನಗಳಲ್ಲಿ ಎಲ್ಲರಿಗೂ ಔಷಧ ಕೊಡುವ ಯೋಜನೆ ಇದೆ. ರೋಗ ಮುಕ್ತ ಸಮಾಜ ನಿರ್ಮಿಸೋಣ ಎಂದು ಹೇಳಿದರು.