ಕರ್ನಾಟಕ

karnataka

ETV Bharat / state

ರಾಮದುರ್ಗ ತಾಲೂಕಿನ 9 ಗ್ರಾಮಗಳ ಸ್ಥಳಾಂತರ ಅನಿವಾರ್ಯ; ಶಾಸಕ ಯಾದವಾಡ - ನೆರೆ ಪ್ರವಾಹ

ನೆರೆ ಪ್ರವಾಹಕ್ಕೆ ತುತ್ತಾಗುತ್ತಿರುವ ರಾಮದುರ್ಗ ತಾಲೂಕಿನ 9 ಗ್ರಾಮಗಳನ್ನು ಸ್ಥಳಾಂತರ ಮಾಡುವ ಅನಿವಾರ್ಯತೆಯಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.

yadavada
yadavada

By

Published : Aug 24, 2020, 7:40 PM IST

ಬೆಳಗಾವಿ:ಪ್ರತಿವರ್ಷ ನೆರೆ ಪ್ರವಾಹಕ್ಕೆ ತುತ್ತಾಗುತ್ತಿರುವ ರಾಮದುರ್ಗ ತಾಲೂಕಿನ ಅವರಾದಿ, ಹಂಪಿಹೊಳಿ, ಕಿಲಬನೂರು ಸೇರಿದಂತೆ 9 ಗ್ರಾಮಗಳ ಸ್ಥಳಾಂತರ ಮಾಡುವ ಅನಿವಾರ್ಯತೆಯಿದೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ತಿಳಿಸಿದರು.

ನಾಳೆ ಬೆಳಗಾವಿಯಲ್ಲಿನ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಎಂ ಬಿಎಸ್‌ವೈ ವೈಮಾನಿಕ ಸಮೀಕ್ಷೆ ಹಿನ್ನೆಲೆ ಜಿಲ್ಲಾಧಿಕಾರಿ ಭೇಟಿಯಾದ ಶಾಸಕ ಮಹಾದೇವಪ್ಪ ಯಾದವಾಡ, ಬೆಳೆ ಸಮೀಕ್ಷೆ ಹಾನಿ ಕುರಿತು ಚರ್ಚೆ ನಡೆಸಿ ಹಲವು ಮಾಹಿತಿಗಳನ್ನು ಪಡೆದುಕೊಂಡಿದ್ದಾರೆ.

ಶಾಸಕ ಮಹಾದೇವಪ್ಪ ಯಾದವಾಡ

ಜಿಲ್ಲಾಧಿಕಾರಿ ಭೇಟಿ ಬಳಿಕ ಶಾಸಕ ಮಹಾದೇವಪ್ಪ ಯಾದವಾಡ ಮಾತನಾಡಿ, ಮಲಪ್ರಭಾ ನದಿ ಪ್ರವಾಹದಿಂದ ರಾಮದುರ್ಗ ತಾಲೂಕಿನಲ್ಲಿ ಕಬ್ಬು, ಬಾಳೆ, ಹತ್ತಿ, ಗೋವಿನಜೋಳ ಸೇರಿದಂತೆ ಅಪಾರ ಬೆಳೆಗಳು ಹಾನಿಯಾಗಿವೆ. ಸಾಕಷ್ಟು ರೈತರ ಮನೆಗೆ ನೀರು ನುಗ್ಗಿದ ಪರಿಣಾಮ ಮನೆಗಳೂ ಹಾನಿಗೆ ಒಳಗಾಗಿವೆ ಎಂದರು.

ಕಳೆದ ಬಾರಿ ಬಂದ ಪ್ರವಾಹದಲ್ಲಿ ರಾಮದುರ್ಗದ ರೈತರಿಗೆ ಬಹಳಷ್ಟು ಅನ್ಯಾಯವಾಗಿದೆ. ಹೀಗಾಗಿ ಈ ಬಾರಿ ಸರಿಯಾಗಿ ಬೆಳೆ ಹಾನಿ ಸಮೀಕ್ಷೆಗೆ ಅಧಿಕಾರಿಗಳಿಗೆ ಸೂಚಿಸಲು ಡಿಸಿಗೆ ಮನವಿ ಮಾಡಿಕೊಂಡಿದ್ದೇನೆ. ಕಳೆದ ಬಾರಿ ಆದ ತಪ್ಪುಗಳು ಮರುಕಳಿಸಬಾರದೆಂದು ಜಿಲ್ಲಾಧಿಕಾರಿಗೆ ತಿಸಿದ್ದೇನೆ. ನಾಳೆ ಸಿಎಂ ಬಿಎಸ್‌ವೈ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ. ರೈತರಿಗೆ ಅನ್ಯಾಯ ಆಗದಂತೆ ಪರಿಹಾರ ಕೊಡಿಸುವ ಯತ್ನ ಮಾಡಬೇಕಾಗಿದೆ ಎಂದರು.

ರಾಮದುರ್ಗ ತಾಲೂಕಿನಲ್ಲಿ ಪ್ರತಿವರ್ಷ ಮಲಪ್ರಭಾ ನದಿಯಿಂದ 20ಕ್ಕೂ ಗ್ರಾಮಗಳು ಜಾಲವೃತವಾಗುತ್ತವೆ. ಹೀಗಾಗಿ ತಕ್ಷಣ 9 ಗ್ರಾಮ ಸ್ಥಳಾಂತರ ಮಾಡುವ ಅನಿವಾರ್ಯತೆಯಿದೆ. ಕಳೆದ ಬಾರಿಯ ಪ್ರವಾಹದ ಪರಿಹಾರವೂ ಇನ್ನೂ ಬಂದಿಲ್ಲ. ನಾಳೆ ಬೆಳಗಾವಿ, ಧಾರವಾಡ ಜಿಲ್ಲಾ ಶಾಸಕರ ಸಭೆಯನ್ನು ಸಿಎಂ ಮಾಡುತ್ತಿದ್ದಾರೆ. ಸಭೆಯಲ್ಲಿ ಸಿಎಂಗೆ ಮನವರಿಕೆ ಮಾಡಿ ಸೂಕ್ತ ಪರಿಹಾರ ಕೊಡಿಸುವ ಪ್ರಯತ್ನ ಮಾಡಲಾಗುವುದು ಎಂದು ಶಾಸಕ ಯಾದವಾಡ ತಿಳಿಸಿದರು.

ABOUT THE AUTHOR

...view details