ಕರ್ನಾಟಕ

karnataka

ETV Bharat / state

ಚಮಕ್ ಚಮಕ್ ಲೈಟ್ ಹಚ್ಚಿಕೊಂಡು ಹೊಸ ಬಸ್ ಬರುತ್ತಿವೆ : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ - MLA Laxmi hebbalkar

ಹಳೆ ಬಸ್​​ಗಳು ಪ್ರತಿನಿತ್ಯ ಇರುವುದರಿಂದ ಹಾನಗಲ್ ಉಪಚುನಾವಣೆ ಫಲಿತಾಂಶ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬರುತ್ತೆ. ಇದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ಸ್ಥಾನದಿಂದ ಆಯ್ಕೆ ಆಗುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿಶ್ವಾಸ ವ್ಯಕ್ತಪಡಿಸಿದರು..

MLA Laxmi hebbalkar talk with Etv bharat
ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​

By

Published : Dec 1, 2021, 5:01 PM IST

ಅಥಣಿ: ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷ ಬೆಂಬಲಿತ 4 ಸಾವಿರಕ್ಕೂ ಅಧಿಕ ಮತಗಳಿವೆ. ಅವುಗಳನ್ನು ಹಿಡಿದಿಟ್ಟುಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ. ಇದರ ನಡುವೆ ಹೊಸ ಹೊಸ ಬಸ್​​ಗಳಲ್ಲಿ ಚಮಕ್ ಚಮಕ್ ಲೈಟು ಹಚ್ಚಿಕೊಂಡು ಬರುತ್ತಿದ್ದಾರೆ.

ಹೊಸ ಬಸ್​​ಗಳು ಜಾತ್ರೆ ಮಾಡಿಕೊಂಡು ಹೋಗುತ್ತಾರೆ, ಹಳೆ ಬಸ್​​ಗಳೇ ರೆಗ್ಯುಲರಾಗಿ ಇರುತ್ತವೆ. ಇದರಿಂದ ಮತದಾರಿಗೆ ತಿಳುವಳಿಕೆ ನೀಡಲು ಎರಡನೇ ಬಾರಿ ಅಥಣಿ ಚುನಾವಣೆ ಪ್ರಚಾರಕ್ಕೆ ಬಂದಿದ್ದೇನೆ ಎಂದುಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ಹೇಳಿದರು.

ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಪರವಾಗಿ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್​ ಅಥಣಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಭರದಿಂದ ಪ್ರಚಾರ ಕೈಗೊಂಡು ಮತ ಯಾಚಿಸಿದರು. ಇದೇ ಸಂದರ್ಭದಲ್ಲಿ ಈಟಿವಿ ಭಾರತ ಜೊತೆ ಮಾತನಾಡಿದರು.

ಕಾಂಗ್ರೆಸ್‌ ಪರ ಪ್ರಚಾರ ಮಾಡಿದ ಬಳಿಕ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪ್ರತಿಕ್ರಿಯೆ ನೀಡಿರುವುದು..​

ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದರೂ ಪತ್ನಿಯನ್ನೇ ಕೊಲೆ ಮಾಡಿದ್ದ ಪತಿಗೆ ಜೀವಾವಧಿ ಶಿಕ್ಷೆ

ಚುನಾವಣೆ ಬಂತು ಅಂದರೆ ಹೊಸ ಹೊಸ ಬಸ್​​ಗಳಲ್ಲಿ ಚಮಕ್ ಚಮಕ್ ಲೈಟ್ ಹಚ್ಚಿಕೊಂಡು ಜಾತ್ರೆ ಮಾಡಿಕೊಂಡು ಹೋಗುತ್ತಿದ್ದಾರೆ. ಬಸ್‌ಗೆ ಬಣ್ಣ ಬಣ್ಣದ ಲೈಟ್ ಹಚ್ಚಿದ್ದಾರೆ, ಹೊಸ ಬಸ್ ಬರುತ್ತೆ ಹೋಗುತ್ತವೆ.

ಹಳೆ ಬಸ್​​ಗಳು ಪ್ರತಿನಿತ್ಯ ಇರುವುದರಿಂದ ಹಾನಗಲ್ ಉಪಚುನಾವಣೆ ಫಲಿತಾಂಶ ಬೆಳಗಾವಿ ವಿಧಾನ ಪರಿಷತ್ ಚುನಾವಣೆಯಲ್ಲಿ ಬರುತ್ತೆ. ಇದರಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೊದಲ ಪ್ರಾಶಸ್ತ್ಯ ಸ್ಥಾನದಿಂದ ಆಯ್ಕೆ ಆಗುತ್ತಾರೆ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್‌ ವಿಶ್ವಾಸ ವ್ಯಕ್ತಪಡಿಸಿದರು.

ನೆರೆ ಸಂತ್ರಸ್ತರ ವಿಚಾರ, ಬೆಲೆಯೇರಿಕೆ, ಬಿಜೆಪಿ ಸರ್ಕಾರ 40 ಪರ್ಸೆಂಟ್ ಕಮಿಷನ್, ಕೊರೊನಾ ಸಂದರ್ಭದಲ್ಲಿ ಸರ್ಕಾರ ನಡುವಳಿಕೆಯಿಂದ ಜನಸಾಮಾನ್ಯರಿಗೆ ಅರ್ಥವಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಅಧಿಕ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸುತ್ತಾರೆ ಎಂದರು.

ABOUT THE AUTHOR

...view details