ಕರ್ನಾಟಕ

karnataka

ETV Bharat / state

ಮಂದಿರ, ಶಾಲೆ ಮತ್ತು ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು : ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ - ಕಂಗ್ರಾಳಿ ಬಿ.ಕೆ. ಗ್ರಾಮದಲ್ಲಿ ಮರಾಠಿ ಶಾಲೆಗೆ ಶಂಕು ಸ್ಥಾಪನೆ

ಮಂದಿರ, ಶಾಲೆ ಮತ್ತು ನೀರಿನ ವಿಚಾರದಲ್ಲಿ ಎಂದಿಗೂ ನಾನು ರಾಜಕಾರಣ ಮಾಡುವುದಿಲ್ಲ. ಶಾಲೆಗಳ ಬೆಳವಣಿಗೆಗೆ ಏನೆಲ್ಲ ನೆರವು ಬೇಕೋ ಅದನ್ನೆಲ್ಲ ಒದಗಿಸಲು ಸಿದ್ದ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

MLA laxmi Hebbalkar lays foundation stone for Marati School at Kangarali B.K
ಮರಾಠಿ ಶಾಲೆಗೆ ಶಂಕು ಸ್ಥಾಪನೆ ಮಾಡಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

By

Published : Feb 28, 2021, 9:07 PM IST

ಬೆಳಗಾವಿ : ಮಂದಿರಗಳು ನಮ್ಮ ಸಂಸ್ಕೃತಿಯ ಪ್ರತೀಕ, ಶಾಲೆಗಳು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಕೇಂದ್ರಗಳು, ನೀರು ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಮಂದಿರ, ಶಾಲೆ ಮತ್ತು ನೀರಿನ ವಿಚಾರದಲ್ಲಿ ರಾಜಕಾರಣ ಮಾಡಬಾರದು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ತಾಲೂಕಿನ ಕಂಗ್ರಾಳಿ ಬಿ.ಕೆ. ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಮರಾಠಿ ಶಾಲೆಯ ನೂತನ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದೇಶದಲ್ಲಿ ಕೊರೊನಾ ಪಿಡುಗಿನ ಸಂದರ್ಭದಲ್ಲಿ ಗ್ರಾಮೀಣ ಪ್ರದೇಶದ ಜನರಿಗೆ ಎಲ್ಲಾ ರೀತಿಯ ನೆರವು ನೀಡಿದ್ದೇನೆ. ನನ್ನ ಕ್ಷೇತ್ರದ ಗ್ರಾಮಗಳ ಅಭಿವೃದ್ಧಿ ಕಾಮಗಾರಿಗಳಿಗೆ ಸಹಾಯ ಮಾಡುವಲ್ಲಿ ಹಿಂದೆ ಬಿದ್ದಿಲ್ಲ. ಒಂದಿಲ್ಲೊಂದು ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಓದಿ : 'ಕುಕ್ಕೆ ಸುಬ್ರಹ್ಮಣ್ಯ ಶಿವರಾತ್ರಿ ಆಚರಣೆ, ಆಗಮ ಪಂಡಿತರಿಂದ ತೀರ್ಮಾನ'

ದೇಶದಲ್ಲಿ ಮಂದಿರಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಶಾಲೆಗಳು ನಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವ ಕೇಂದ್ರಗಳಾಗಿವೆ. ನೀರು ನಿತ್ಯ ಬದುಕಿನ ಅವಿಭಾಜ್ಯ ಅಂಗವಾಗಿದೆ. ಹೀಗಾಗಿ ಮಂದಿರ, ಶಾಲೆ ಮತ್ತು ನೀರಿನ ವಿಚಾರದಲ್ಲಿ ಎಂದಿಗೂ ನಾನು ರಾಜಕಾರಣ ಮಾಡುವುದಿಲ್ಲ. ಶಾಲೆಗಳ ಬೆಳವಣಿಗೆಗೆ ಏನೆಲ್ಲ ನೆರವು ಬೇಕೋ ಅದನೆಲ್ಲ ಒದಗಿಸಲು ಸಿದ್ಧಳಿದ್ದು, ಗ್ರಾಮಸ್ಥರ ಸಹಕಾರ ಬೇಕು ಎಂದರು. ಕಾರ್ಯಕ್ರಮದಲ್ಲಿ ತಾಲೂಕು ಪಂಚಾಯತ್​​ ಅಧ್ಯಕ್ಷ ಶಂಕರಗೌಡ ಪಾಟೀಲ, ಗ್ರಾಮ ಪಂಚಾಯತ್​​ ಅಧ್ಯಕ್ಷೆ ಸಂಧ್ಯಾ ಚೌಗಲೆ ಇದ್ದರು.

For All Latest Updates

TAGGED:

ABOUT THE AUTHOR

...view details