ಬೆಳಗಾವಿ: ತಾಲೂಕಿನ ಸಾಂಬ್ರಾದ ನರೇಗಾ ಕಾರ್ಮಿಕರಿಗೆ ಊಟ, ಮಾಸ್ಕ್ ಹಂಚುವ ಮೂಲಕ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಇಂದು ತಮ್ಮ ಜನ್ಮ ದಿನ ಆಚರಿಸಿಕೊಂಡರು.
ನರೇಗಾ ಕಾರ್ಮಿಕರಿಗೆ ಊಟ ನೀಡಿ ಜನ್ಮದಿನ ಆಚರಿಸಿಕೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ - Laxmi Hebbalkar's Birthday
ನರೇಗಾ ಕಾರ್ಮಿಕರಿಗೆ ಊಟ, ಮಾಸ್ಕ್ ಹಂಚುವ ಮೂಲಕ ಜನ್ಮ ದಿನ ಆಚರಿಸಿಕೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಆನಂತರ ಗ್ರಾಮದ 2 ದೇವಾಲಯಗಳಿಗೆ ದೇಣಿಗೆ ನೀಡಿದರು.
ನರೇಗಾ ಕಾರ್ಮಿಕರಿಗೆ ಊಟ ನೀಡಿ ಜನ್ಮದಿನ ಆಚರಿಸಿಕೊಂಡ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಆಹಾರ ವಿತರಣೆ ನಂತರ ಶಾಸಕಿ ಕಾರ್ಮಿಕರ ಆರೋಗ್ಯ ಹಾಗೂ ಕಷ್ಟಗಳನ್ನು ವಿಚಾರಿಸಿದರು. ಈ ವೇಳೆ ಮಾತನಾಡಿದ ಅವರು, ನಿಮ್ಮೊಂದಿಗೆ ಜನ್ಮ ದಿನ ಆಚರಿಸಿಕೊಳ್ಳಲು ಖುಷಿಯಾಗುತ್ತಿದೆ ಎಂದರು.
ಹುಟ್ಟು ಹಬ್ಬದ ನಿಮಿತ್ತ ಗ್ರಾಮದ ಹಿರಿಯರ ಆಶೀರ್ವಾದ ಪಡೆದ ಶಾಸಕಿ, ಬಾಳೇಕುಂದ್ರಿ ಕೆ. ಹೆಚ್ ಗ್ರಾಮದ ಮಾರುತಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ದೇವಸ್ಥಾನ ಕಮೀಟಿಗೆ ಐದು ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು. ಜೊತೆಗೆ ನಿಲಜಿ ಗ್ರಾಮದ ಶ್ರೀ ಜೀಜಾ ಮಾತಾ ದೇವಸ್ಥಾನ ಜೀರ್ಣೋದ್ಧಾರಕ್ಕೂ ಕೂಡ ಮೂರುವರೆ ಲಕ್ಷ ರೂಪಾಯಿಗಳ ಚೆಕ್ ಹಸ್ತಾಂತರಿಸಿದರು.