ಕರ್ನಾಟಕ

karnataka

ETV Bharat / state

ಗೆಲ್ಲುವುದೇ ನಮ್ಮ ಗುರಿಯಾಗಿತ್ತು, ಗೆಲುವು ಸಾಧಿಸಿದ್ದೇವೆ: ಲಕ್ಷ್ಮಿ ಹೆಬ್ಬಾಳ್ಕರ್ - hebbalkar reaction about result

ಇಂದು ಸೋದರನ ಜೊತೆ ಸುವರ್ಣಸೌಧಕ್ಕೆ ಆಗಮಿಸಿದ ವೇಳೆ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಪರೋಕ್ಷವಾಗಿ ಜಾರಕಿ ಸಹೋದರನ ವಿರುದ್ಧ ವಾಗ್ದಾಳಿ ನಡೆಸಿದರು.

Lakshmi hebbalkar slammed jarkiholi brothers
ಜಾರಕಿಹೊಳಿ ಸಹೋದರರ ಬಗ್ಗೆ ಹೇಳಿಕೆ ನೀಡಿದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್

By

Published : Dec 15, 2021, 3:19 PM IST

Updated : Dec 15, 2021, 3:57 PM IST

ಬೆಳಗಾವಿ: ಗೆಲ್ಲುವುದೇ ನಮ್ಮ ಗುರಿಯಾಗಿತ್ತು. ಜಯ ಸಾಧಿಸಿದ್ದೇವೆ. ಯಾರನ್ನೋ ಸೋಲಿಸಬೇಕೆಂದು ಸ್ಪರ್ಧೆ ಮಾಡಿರಲಿಲ್ಲ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್

ಸಹೋದರ ಹಾಗೂ ನೂತನ ಪರಿಷತ್ ಸದಸ್ಯ ಚೆನ್ನರಾಜ ಹಟ್ಟಿಹೊಳಿ ಜೊತೆ ಸುವರ್ಣಸೌಧಕ್ಕೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪರಿಷತ್​ ಚುನಾವಣೆಗೆ ಮೊದಲ‌ ದಿನದಿಂದ ಒಗ್ಗಟ್ಟಿನಿಂದ ಕೆಲಸ‌ ಮಾಡಿದ್ದೆವು. ಹೀಗಾಗಿ ಗೆಲುವು ಸಾಧಿಸಿದ್ದೇವೆ ಎಂದರು.

ಪರಿಷತ್ ಚುನಾವಣೆ ಹಣ ಹಂಚಿಕೆ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹಣವನ್ನಷ್ಟೇ ಅಲ್ಲ, ಚುನಾವಣೆಯಲ್ಲಿ ನಾವೂ ನಡೆದುಕೊಳ್ಳುವ ರೀತಿಯನ್ನು ಜನರು ನೋಡುತ್ತಾರೆ. ಮತದಾರರು ಪ್ರಬುದ್ಧರಾಗಿದ್ದಾರೆ.

ಚುನಾವಣೆಯಲ್ಲಿ ಹಣ ಮುಖ್ಯ ಅಲ್ಲ. ನಮ್ಮ ಮತದಾರರು, ಕಾರ್ಯಕರ್ತರು ಯಾರಿಗೆ ಉತ್ತರ ಕೊಡಬೇಕಾಗಿತ್ತು. ಅವರಿಗೆ ಉತ್ತರ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ರಮೇಶ್ ಜಾರಕಿಹೊಳಿಗೆ ಟಾಂಗ್ ನೀಡಿದರು.

ಯಾವುದೋ ಒಂದು ಕುಟುಂಬದ ವಿರುದ್ಧ ಹೋರಾಟ ಇತ್ತ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಆ ಕುಟುಂಬದ ಸಹೋದರರು ನಮ್ಮ ಜೊತೆಗೆ ಇರಲಿಲ್ಲ ಎಂದು ಸತೀಶ್ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೇ ಸೂಚ್ಯವಾಗಿ ತಿಳಿಸಿದರು.

ಇದನ್ನೂ ಓದಿ: ಕುಟುಂಬ ರಾಜಕಾರಣ : ಪರಿಷತ್ ಅಖಾಡದಲ್ಲಿ ಗೆದ್ದ 25 ಅಭ್ಯರ್ಥಿಗಳಲ್ಲಿ 10 ಮಂದಿಗೆ ಕುಟುಂಬ ರಾಜಕೀಯದ ಹಿನ್ನೆಲೆ..

Last Updated : Dec 15, 2021, 3:57 PM IST

ABOUT THE AUTHOR

...view details